ಕೌನ್‌ ಬನೇಗಾ ಕರೋಡ್ ‌ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿ ಬಾಲಕ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.17: ಕೌನ್‌ ಬನೇಗಾ ಕರೋಡ್‌ ಪತಿ(ಕೆಬಿಸಿ) ಹಾಟ್‌ ಸೀಟಿಗೇರಿದ್ದ ಉಡುಪಿಯ ಬಾಲಕ 12 ವರ್ಷದ ಅನಮಯ 50 ಲಕ್ಷ ರೂ.ಬಹುಮಾನ ಗೆದ್ದಿದ್ದಾನೆ. ಒಂದು ಕೋಟಿ ರೂ. ಮೊತ್ತದ 12ನೇ ಪ್ರಶ್ನೆಯಾದ ಮಹಾಭಾರತ ಯುದ್ಧದಲ್ಲಿ ಬದುಕುಳಿದು ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ಕರ್ಣನ ಪುತ್ರ ಯಾರೆನ್ನುವ ಪ್ರಶ್ನೆಗೆ(ಉತ್ತರ- ವೃಷಕೇತು) ಇದ್ದ ಒಂದು ಲೈಫ್‌ ಲೈನ್‌ ಬಳಸಿ 50:50 ಅವಕಾಶ ಬಳಸಿದರೂ ಉತ್ತರ ಸಿಗದೆ ಕೊನೆಗೆ ಸ್ಪರ್ಧೆಯಿಂದ ಹಿಂದೆ ಸರಿದು 50 ಲಕ್ಷ ರೂ.ಮೊತ್ತಕ್ಕೆ ತೃಪ್ತಿಪಡಬೇಕಾಯಿತು.

ಈತನ ರ್ಟ್‌ ಉತ್ತರಗಳಿಗೆ ಬಾಲಿವುಡ್‌ ಬಾದ್‌ ಶಾ ಅಮಿತಾಬ್‌ ಬಚ್ಚನ್‌ ಸಂಪೂರ್ಣವಾಗಿ ಫಿದಾ ಆಗಿದ್ದರು, ಅಲ್ಲದೇ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕೂಡ ಬಾಲಕನ ಸ್ಮಾರ್ಟ್‌ನೆಸ್‌ಗೆ ತಲೆ ಬಾಗಿದ್ದಾರೆ.ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ ಅವರು ಕರಾವಳಿಯ ಕೀರ್ತಿಪತಾಕೆ ಹಾರಿಸಿದ್ದಾರೆ.

Also Read  ನೇಕಾರ ಲಕ್ಷ್ಮಣ ಶೆಟ್ಟಿಗಾರ್ ಅವರ ನೆರವಿಗೆ ನಿಂತ ಕೇಂದ್ರ ಸಚಿವೆ ಸ್ಮೃತಿ ಇರಾನಿ

 

error: Content is protected !!
Scroll to Top