ಮಂಗಳೂರು :ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ತಲವಾರಿನಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ಕರ್ತವ್ಯದಲ್ಲಿದ್ದ ಹೆಡ್‌‌ ಕಾನ್ಸ್‌ಟೇಬಲ್‌ಯೋರ್ವರ ಮೇಲೆ ದುಷ್ಕರ್ಮಿಯೋರ್ವ ತಲವಾರಿನಿಂದ ಹಲ್ಲೆ ಮಾಡಿದ ಘಟನೆ ಇಂದು ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರಾ ಟಾಕೀಸ್‌ ಮುಂಭಾಗದಲ್ಲಿ ಈ ಘಟನೆ ನಡೆದಿದೆ.

ಬಂದರು ಠಾಣೆಯ ಹೆಡ್‌‌ ಕಾನ್ಸ್‌ಟೇಬಲ್‌‌‌ ಗಣೇಶ್‌‌ ಕಾಮತ್‌ ಹಾಗೂ ಇಬ್ಬರು ಸಿಬ್ಬಂದಿ ತಪಾಸಣೆ ನಿರತರಾಗಿದ್ದರು. ಈ ಸಂದರ್ಭ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಮುಖ್ಯ ಪೇದೆ ಗಣೇಶ್‌ ಕಾಮತ್‌ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಕುರಿತು ಪ್ರಕರಣ ದಾಖಲಾಗಿದೆ.

Also Read  ಉಡುಪಿಯಲ್ಲಿ ಕೆಂಗೇರಿ ನಿವಾಸಿ ಆತ್ಮಹತ್ಯೆ

error: Content is protected !!
Scroll to Top