ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ನಗರದ ಬಲ್ಮಠದ ಬಳಿಯಿರುವ ಪೆಟ್ರೋಲ್ ಬಂಕ್‍ನಲ್ಲಿ ಕುಸಿದು ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಿಲಾಯಿತು ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 27ರಂದು ಮೃತಪಟ್ಟಿದ್ದಾರೆ.


ಅಪರಿಚಿತ ಮೃತ ವ್ಯಕ್ತಿಯು ಕುದ್ರೋಳಿಯ ನಿವಾಸಿಯಾಗಿದ್ದು, ಸುಮಾರು 5 ಅಡಿ ಎತ್ತರವಿದ್ದು, ಗೋಧಿ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಈ ಚಹರೆಯುಳ್ಳ ಮೃತರ ವಾರಸುದಾರರಿದ್ದಲ್ಲಿ ಮಂಗಳೂರು ಪೂರ್ವಪೊಲೀಸ್ ಠಾಣಾ (ಕದ್ರಿ ಪೊಲೀಸ್ಠಾಣೆ) ದೂ.ಸಂ:0824-2220520 ಗೆ ಸಂಪರ್ಕಿಸುವಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪುತ್ತೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾಮೂಹಿಕ ಪ್ರತಿಭಟನೆ

 

error: Content is protected !!
Scroll to Top