ನೂಜಿಬಾಳ್ತಿಲ: ಶಾಸಕರಿಂದ ಮನೆ ಭೇಟಿ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಡಿ.16: ಸುಳ್ಯ ಶಾಸಕ ಎಸ್.ಅಂಗಾರ ಅವರು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ಸೋಮವಾರ ಮನೆ ಬೇಟಿ ನಡೆಸಿದರು.

ನೂಜಿಬಾಳ್ತಿಲ 2ನೇ ವಾರ್ಡ್‍ಗೆ ಬೇಟಿ ನೀಡಿದ ಶಾಸಕರು ಸ್ಥಳೀಯರ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಮನೆ ಬೇಟಿ ನಡೆಸಿದರು. ಬದಿಬಾಗಿಲು-ಒರುಂಬಾಲು ರಸ್ತೆಗೆ ವಿಶೇಷ ಅನುದಾನ ರೂ.10 ಲಕ್ಷ ಮಂಜೂರಾಗಿದ್ದು, ಚುನಾವಣೆ ಮುಗಿದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದರು. ಪ್ರಮುಖರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಎ.ಪಿ.ಗಿರೀಶ್, ಚಂದ್ರಶೇಖರ ನೂಜಿ, ರಾಮಚಂದ್ರ ಎಸ್., ಪ್ರಭಾಕರ ಬಳಕ್ಕ, ಅನಿಲ್ ಕೆರ್ನಡ್ಕ, ಪ್ರಭಾಕರ ಪದಕ, ರವೀಂದ್ರ ನಿಡ್ಡೋ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Also Read  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಸಮವಸ್ತ್ರ ವಿತರಣೆ

 

error: Content is protected !!
Scroll to Top