(ನ್ಯೂಸ್ ಕಡಬ) newskadaba.com ಉಡುಪಿ, ಡಿ.16: ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು ಜಿಲ್ಲೆಯ ಒಟ್ಟು 153 ಗ್ರಾಮ ಪಂಚಾಯತ್ ಗಳಲ್ಲಿ ನಡೆಯಲಿದ್ದು, ಕೋವಿಡ್19 ಹಿನ್ನೆಲೆಯಲ್ಲಿ ಈ ಎಲ್ಲಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೊರೋನಾ ಸುರಕ್ಷಿತ ಕಿಟ್‌ಗಳನ್ನು ರಾಜ್ಯ ಚುನಾವಣಾ ಆಯೋಗ ಸರಬರಾಜು ಮಾಡಿದೆ.
ಎಂ.ಎಸ್.ಐ.ಲ್ ನಿಂದ ಸರಬರಾಜು ಮಾಡಿರುವ ಈ ಕಿಟ್‌ಗಳಲ್ಲಿ, 500 ಎಂಲ್‌ನ 4 ಸ್ಯಾನಿಟೈಸ್ ಬಾಟೆಲ್, 100 ಎಂಎಲ್‌ನ 6 ಸ್ಯಾನಿಟೈಸ್ ಬಾಟೆಲ್, ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ 20, ಫೇಸ್ ಶೀಲ್ಡ್-6 ಮತ್ತು 6 ಜೊತೆ ಹ್ಯಾಂಡ್ ಗ್ಲೌಸ್ ಗಳು ಹಾಗೂ 1 ಬಯೋ ಮೆಡಿಕಲ್ ಡಿಸ್ಪೋಸಲ್ ಬ್ಯಾಗ್‌ಗಳನ್ನು ಈ ಕಿಟ್ ಒಳಗೊಂಡಿದೆ.
ಜಿಲ್ಲೆಗೆ ಒಟ್ಟು 1260 ಕಿಟ್‌ಗಳು ಹಾಗೂ 620 ಥರ್ಮಲ್ ಸ್ಕ್ಯಾನರ್‌ಗಳು ಸರಬರಾಜು ಆಗಿದ್ದು, ಒಟ್ಟು 5040 ಚುನಾವಣಾ ಸಿಬ್ಬಂದಿಗೆ ಈ ಕಿಟ್‌ಗಳ ಪ್ರಯೋಜನ ದೊರೆಯಲಿದೆ.ಪ್ರತೀ ಮತದಾರರು ಮತಗಟ್ಟೆಗೆ ಬರುವಾಗ ಮಾಸ್ಕ್ ಧರಿಸಿರಬೇಕು, ಮತಗಟ್ಟೆ ಪ್ರವೇಶಿಸುವಾಗ ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸಬೇಕು, ಕೋವಿಡ್ ಸುರಕ್ಷಾ ನಿಯಮಗಳ ಉಲ್ಲಂಘನೆ ಆಗದಂತೆ, ಅತ್ಯಂತ ಸುರಕ್ಷಿತವಾಗಿ ಮತದಾನ ಪ್ರಕ್ರಿಯೆಯನ್ನು ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.