ಸುಳ್ಯ :ಹಳ್ಳಕ್ಕೆ ಉರುಳಿದ ಸ್ಕೂಟಿ ➤ ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.16: ಸ್ಕೂಟಿಯೊಂದು ಹಳ್ಳಕ್ಕೆ ಉರುಳಿಬಿದ್ದು ಸವಾರರು ಗಾಯಗೊಂಡ ಘಟನೆ ಎಲಿಮಲೆ ಸಮೀಪದ ಜಬಳೆಯಲ್ಲಿ ನಡೆದಿದೆ.

ಬೊಮ್ಮಾರಿನ ಅಚ್ಚುತ ಎಂಬವರು ನಾರ್ಣಕಜೆಯಿಂದ ಎಲಿಮಲೆಯತ್ತ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಜಬಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸ್ಕೂಟಿ ಎಡಬದಿಯ ತೋಡಿಗೆ ಉರುಳಿಬಿತ್ತು.ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ಅಚ್ಚುತ ಮೋಕ್ಷಿತಾರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

Also Read  ಅನ್ಯಕೋಮಿನ ಯುವತಿಯರನ್ನು ಕರೆದೊಯ್ದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ!

 

error: Content is protected !!
Scroll to Top