ಇನ್ನು ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿದಲ್ಲಿ ರೂ. 50,000 ದಂಡ.!

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ.16: ಇನ್ನು ಮುಂದೆ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡುಬಂದಲ್ಲಿ ಸರಕಾರ ನಿಗದಿಪಡಿಸಿದ ರೂ. 50,000 ದಂಡವನ್ನು ಕಟ್ಟುನಿಟ್ಟಾಗಿ ಪಾವತಿಸಬೇಕಾದೀತು ಎಂದು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಜಿ ಹೇಳಿದರು.

 

ಅವರು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಸೋಮವಾರವ ನಡೆದ ಉಳ್ಳಾಲ ಪೊಲೀಸ್ ಠಾಣೆಯ ಅಪರಾಧ ತಡೆ ಮಾಸಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೊರೊನಾ ಸಂಕಷ್ಟ ದಿಂದ ದುಡಿಮೆ ಇಲ್ಲದೆ ಜನ ತೊಂದರೆಗೀಡಾಗಿದ್ದಾರೆ. ಈ ಸಂದರ್ಭ ವಾಹನ ಸಂಚಾರದ ಕಾನೂನಿನಲ್ಲಿ ಮಾನವೀಯತೆ ತೋರಿಸಿದ್ದೇವೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ವಾಹನದ ಆರ್.ಸಿ, ಡಿ.ಎಲ್, ಇನ್ಶುರೆನ್ಸ್ , ಎಮಿಷನ್ ಇಲ್ಲದೇ ಇದ್ದಲ್ಲಿ ಸರಕಾರ ನಿಗದಿ ಮಾಡಿರುವ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚಾಗಿ ಅಪ್ರಾಪ್ತರು ವಾಹನ ಸಂಚಾರ ನಡೆಸುತ್ತಿರುವುದು ಕಂಡುಬರುತ್ತಿದೆ. ಇದರಿಂದ ಅವರ ಜೀವಕ್ಕೂ ಅಪಾಯ, ಹೊರಗಿನವರಿಗೂ ಅಪಾಯ. ಈ ನಿಟ್ಟಿನಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಸರಕಾರ ನಿಗದಿ ಮಾಡಿದ ರೂ.50,000 ದಂಡವನ್ನು ಹಾಕಲಾಗುವುದು ಎಂದು ಎಚ್ಚರಿಸಿದ ಅವರು ವಂಚನೆ ಪ್ರಕರಣಗಳು ಅಧಿಕವಾಗುತ್ತಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಿದೆ. ಉಳ್ಳಾಲ ಭಾಗದಲ್ಲಿ ಕೆಲ ವಾಹನಗಳು ಟಿಂಟ್ ಹಾಕಿ ತಿರುಗುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಅಂತವರ ವಿರುದ್ಧ ಕಠಿಣ ಕಾನೂನಿನಡಿ ಶಿಕ್ಷೆ ಖಂಡಿತ ಎಂದು ಎಚ್ಚರಿಸಿದರು.

Also Read  ವೀರಕಂಬ: ದುಷ್ಕರ್ಮಿಗಳಿಂದ ಮಸೀದಿಗೆ ಕಲ್ಲೆಸೆತ

 

 

error: Content is protected !!
Scroll to Top