(ನ್ಯೂಸ್ ಕಡಬ) newskadaba.com ಟೋಕಿಯೊ, ಡಿ.16:‘ಟ್ವಿಟರ್ ಹಂತಕ’ನೆಂದು ಕುಖ್ಯಾತಿ ಪಡೆದ ಜಪಾನ್ ನ 30 ವರ್ಷದ ಯುವಕನೊಬ್ಬನಿಗೆ ಟೋಕಿಯೊ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ. ಆನ್ ಲೈನ್ ನಲ್ಲಿ ಪರಿಚಯವಾದ 9 ಮಂದಿಯನ್ನು ಹತ್ಯೆಗೈದ ಅಪರಾಧಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.
ತಾಕಾಹಿರೊ ಶಿರೈಶಿ (30) ತಾನು ಮಾಡಿರುವ ಕೊಲೆಗಳನ್ನು ಒಪ್ಪಿಕೊಂಡಿದ್ದಾರೆ. ಟ್ವಿಟರ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೆನಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದವರನ್ನು ಗುರಿಯಾಗಿಸಿ, ಅವರ ಸ್ನೇಹ ಸಂಪಾದಿಸಿ, ಸಾಯಲು ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿ, 9 ಮಂದಿಯನ್ನು ವಿಕೃತವಾಗಿ ಈತ ಹತ್ಯೆ ಮಾಡಿದ್ದಾನೆ.ಮೃತರೆಲ್ಲರೂ 15-26ರ ನಡುವಿನ ವಯಸ್ಸಿನವರೇ ಆಗಿದ್ದಾರೆ. ಕರಣದ ವಿಚಾರಣೆಯ ಬಳಿಕ, ತೀರ್ಪು ಪ್ರಕಟನೆಯ ವೇಳೆ ನ್ಯಾಯಾಲಯದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು. ಹತ್ಯೆಗೀಡಾದ ಸಂತ್ರಸ್ತರ ಹೆತ್ತವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.