ಹಲವು ಕಡೆ ಕಳವು ಪ್ರಕರಣ ➤ ಕಿಲಾಡಿ ದಂಪತಿ ಅರೇಷ್ಟ್

(ನ್ಯೂಸ್ ಕಡಬ) newskadaba.com ಮುಲ್ಕಿ, ಡಿ.15: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಗಳ ಬಗ್ಗೆ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಆರೋಪಿಗಳನ್ನು ಧಾರವಾಡ ಟೋಲ್ ನಾಕಾ ಜನತಾನಗರ ಬಳಿಯ ನಿವಾಸಿ ರಾಜೇಶ್ ನಾಯ್ಕ ಆಲಿಯಾಸ್ ರಾಜ ಯಾನೆ ರಾಜು ಪಾಮಡಿ(42) ಮತ್ತು ಆತನ ಪತ್ನಿ ಪದ್ಮಾ ಪಾಮಡಿ (37)ಎಂದು ಗುರುತಿಸಲಾಗಿದೆ.ಆರೋಪಿಗಳಿಂದ 62 ಗ್ರಾಂ ಚಿನ್ನಾಭರಣ,2 ಕೆಜಿ 500 ಗ್ರಾಂ ಬೆಳ್ಳಿ ಸಾಮಗ್ರಿ ಸೇರಿ ಒಟ್ಟು 3,98,000ರೂ. ಮೌಲ್ಯದ ಸೊತ್ತು ವಶಪಡಿಸಲಾಗಿದೆ. ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ನಿರ್ದೇಶನದಂತೆ ಉಪಪೊಲೀಸ್ ಆಯುಕ್ತರಾದ ಹರಿರಾಮ್ ಶಂಕರ್, ವಿನಯ ಎ.ಗಾಂವ್ಕರ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಬೆಳ್ಳಿಯಪ್ಪ ನೇತೃತ್ವದಲ್ಲಿ ವೈಫಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಸುಮಾಧರ, ಉಪನಿರೀಕ್ಷಕ ದೇಜಪ್ಪ, ವಿನಾಯಕ ತೋರಗಲ್, ಎಎಸ್ಸೈ ಚಂದ್ರಶೇಖರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Also Read  ಮನುಕುಲದ ಶ್ವಾಸಕೋಶ ಅರಣ್ಯ ➤ ಕೋಟಾ ಶ್ರೀನಿವಾಸ್ ಪೂಜಾರಿ

 

 

error: Content is protected !!
Scroll to Top