ಐತ್ತೂರು: ಮಕ್ಕಳ ವಿಶೇಷ ಗ್ರಾಮ ಸಭೆ ► ಸಮಾಜದಲ್ಲಿನ ಹಾಗು ಹೋಗುಗಳನ್ನು ಜನಪ್ರತಿನಿಧಿಗಳ ಮುಂದಿಡುವ ಉತ್ತಮ ವೇದಿಕೆ- ವಿದ್ಯಾರ್ಥಿ ನಾಯಕ ಹಾರೀಶ್

(ನ್ಯೂಸ್ ಕಡಬ) newskadaba.com ಕಡಬ, ಅ.11. ಇಲ್ಲಿನ ಐತ್ತೂರು ಗ್ರಾ.ಪಂಚಾಯತ್ನಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕೆ ಅವರು, ಮಕ್ಕಳ ಗ್ರಾಮಸಭೆಗೆ ಹೆಚ್ಚಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಭಾಗವಹಿಸುವ ಮೂಲಕ ಶಿಕ್ಷಣಕ್ಷೇತ್ರದ ಪ್ರಗತಿಗೆ ಒತ್ತು ನೀಡಬೇಕು ಅಷ್ಟೇ ಅಲ್ಲದೆ ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಸದಸ್ಯರು ಕೂಡಾ, ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿ ಮಕ್ಕಳ ಸಲಹೆ ಸೂಚನೆಗಳ ಕುರಿತು ಸ್ಥಳೀಯಾಡಳಿತ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮಕ್ಕಳ ಪೋಷಕರು ಇಂತಹ ಸಭೆಗಳಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹಿಸಬೇಕಾಗಿದೆ. ಇಂದಿನ ಮಕ್ಕಳೇ ಮುಂದೆ ದೇಶ ರಕ್ಷಣೆಗೆ ಮುಂದಾಗುವ ಪ್ರಜೆಗಳಾಗಲಿದ್ದು ಚಿಕ್ಕಂದಿನಿಂದಲೇ ಸಮಾಜದ ಕುಂದು ಕೊರತೆಯನ್ನು ತಿಳಿಸಿ ಬಗೆಹರಿಸಿಕೊಳ್ಳಲು ಶ್ರಮಿಸಬೇಕಾಗಿದೆ. ಸಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಉತ್ತಮ ಸಲಹೆ ಸೂಚನೆ ನೀಡಿದ್ದಾರೆ ಅವರ ಬೇಡಿಕೆಗೆ ಗ್ರಾ.ಪಂ.ನಿಂದ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಉದ್ಯೋಗ ಖಾತರಿ ಯೋಜನೆಯಲ್ಲಿ ಶಾಲಾ ಆಟದ ಮೈದಾನ, ಆವರಣ ಗೋಡೆ, ಇಂಗುಗುಂಡಿ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶ ಇದ್ದು ಗ್ರಾಮಸ್ಥರು ಮುಂದಾಗಬೇಕು ಎಂದರು.

Also Read  ರೇಣುಕಾಸ್ವಾಮಿ ಕೊಲೆ ಪ್ರಕರಣ- ಮತ್ತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ

ಸಭೆಯ ಅಧ್ಯಕ್ಷತೆ ವಹಿಸಿದ್ದ ಐತ್ತೂರು ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿ ನಾಯಕ ಹಾರೀಶ್ ಮಾತನಾಡಿ, ಮಕ್ಕಳಿಗೆ ಸಮಾಜದಲ್ಲಿನ ಹಾಗು ಹೋಗುಗಳ ಬಗ್ಗೆ ಕಾಳಜಿ ವಹಿಸಿ ಜನಪ್ರತಿನಿಧಿಗಳ ಮುಂದಿಡಲು ಮಕ್ಕಳ ಗ್ರಾಮ ಸಭೆ ವೇದಿಕೆಯಾಗಿದೆ ಎಂದರು.

ನೇಲ್ಯಡ್ಕ ಶಾಲಾ ಶಿಕ್ಷಕ ತೀರ್ಥೆಶ್ ಮಾತನಾಡಿ ವಿದ್ಯಾರ್ಥಿಗಳನ್ನು ಪ್ರೀತಿ, ಸೌಜನ್ಯತೆಯಿಂದ ಅವರ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಶಿಕ್ಷಕರು ಹೆಚ್ಚಿನ ರೀತಿಯಲ್ಲಿ ಶ್ರಮ ವಹಿಸುತ್ತಿದ್ದು ಪೋಷಕರು ಕೂಡ ಪ್ರೀತಿಯಿಂದ ತಮ್ಮ ಮಕ್ಕಳನ್ನು ತಿದ್ದುವ ಮೂಲಕ ಉತ್ತಮ ಸಂಸ್ಕಾರವನ್ನು ಕಲಿಸುವುದರೊಂದಿಗೆ ರಾಷ್ಟ್ರಪ್ರೇಮಿಗಳಾಗಿ ಉನ್ನತವಾದ ಹುದ್ದೆ ಪಡೆದು ಸತ್ಪ್ರಜೆಗಳಗುವಂತೆ ಪ್ರೇರೆಪಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿರಾಡಿ ವಲಯ ಮೇಲ್ವಿಚಾರಕಿ ಭವಾನಿ, ಆರೋಗ್ಯ ಇಲಾಖೆಯ ಸಹಾಯಕಿ ಉಷಾ ಇಲಾಖಾ ಮಾಹಿತಿ ನೀಡಿದರು. ಬಳಿಕ ವಿವಿಧ ಆಟೋಟ ಸ್ಫರ್ದೆಗಳಲ್ಲಿ ವಿಜೇತರಾದ ಅಂಗನವಾಡಿ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಪಂಚಾಯಿತಿ ಸದಸ್ಯರಾದ ಪಿ.ಪಿ. ಮಥ್ಯಾಸ್, ಯೂಸುಫ್ ಎಂ.ಪಿ., ಶ್ರೀಧರ ಗೌಡ, ಗೋಮತಿ ಇಸ್ಮಾಯಿಲ್ ಎಂ. ಎಚ್ , ಐತ್ತೂರು ಶಾಲಾ ಶಿಕ್ಷಕಿ ಸುಂದರಿ, ನೇಲ್ಯಡ್ಕ ಅಂಗನವಾಡಿ ಕಾರ್ಯಕರ್ತೆ ರಾಧಾ ಪಿಜೆ., ಕೋಡಂದೂರು ಅಂ. ಕಾರ್ಯಕರ್ತೆ ಕಮಾಲಕ್ಷಿ, ಬಜಕೆರೆ ಅಂ. ಕಾರ್ಯಕರ್ತೆ ಲಿಂಗಮ್ಮ, ಸುಂಕದಕಟ್ಟೆ ಅಂಗನವಾಡಿ ಕಾರ್ಯಕರ್ತೆ ಸುಶೀಲಾ, ಓಟಕಜೆ ಹಾಗೂ ಎನ್ಕೂಪ್ ಸರಸ್ವತಿ, 72ಕಾಲೋನಿ ಅಂ.ಕಾರ್ಯಕರ್ತೆ ದೇವಕಿ ಪಂಚಾಯತ್ ಕಾರ್ಯದರ್ಶಿ ವೆಂಕಟರಮಣ ಗೌಡ ಸ್ವಾಗತಿಸಿ, ಗುಮಾಸ್ತ ಶಿಬು ವಂದಿಸಿದರು. ಸಿಬ್ಬಂದಿ ದೇವಿಕಾ ತಾರನಾಥ ಸಹಕರಿಸಿದರು.

error: Content is protected !!
Scroll to Top