ಬೆಳ್ತಂಗಡಿ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ➤ ಇಬ್ಬರು ಯುವತಿಯರನ್ನು ರಕ್ಷಿಸಿದ ಖಾಕಿ ತಂಡ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ.15: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಇಬ್ಬರು ಮಹಿಳೆಯರೂ ಸೇರಿದಂತೆ ಮೂವರು ಆರೋಪಿತರನ್ನು ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರ ನೇತೃತ್ವದ ಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರ ತಂಡ ಪತ್ತೆಹಚ್ಚಿದೆ.

ಮೇಲಂತಬೆಟ್ಟು ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿರುವ ರಾಮಚಂದ್ರ ದೇವಾಡಿಗ ಎಂಬವರು ಪಡೆದಿದ್ದ ಬಾಡಿಗೆ ಮನೆಯಲ್ಲಿ  ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತಪಡಿಸಿಕೊಂಡ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ಬಂದ ಮಾಹಿತಿಯಂತೆ ನಡೆಸಿದ ಕಾರ್ಯಾಚರಣೆ ಯಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ಬಂಧಿತರನ್ನು ಜನಾರ್ದನ ಪೂಜಾರಿ(45ವ.) ಜನಾರ್ದನ (40ವ.) ಮತ್ತು ರಾಮಚಂದ್ರ (45ವ.) ಎಂಬವರೆಂದು ಗುರುತಿಸಲಾಗಿದೆ.ಜನಾರ್ದನ ಪೂಜಾರಿ ಬಂಟ್ವಾಳ ಇವರ ಜೊತೆ, ವೈಶ್ಯಾವಾಟಿಕೆಯಲ್ಲಿ ನೊಂದ ಮಹಿಳೆಯರಾದ ಶ್ರದ್ದಾ ಮತ್ತು ಶಿಲ್ಪಾ ಎಂಬಿಬ್ಬರನ್ನ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ‌. ಖಚಿತ ಮಾಹಿತಿ ಮೇರೆಗೆ ಸೋಮವಾರ ಬೆಳಿಗ್ಗೆ 10-45 ರ ಸಮಯಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಅವರ ನಿಯೋಗ ದಾಳಿ ನಡೆಸಿ ಕೃತ್ಯ ಪತ್ತೆಹಚ್ಚಿದ್ದಾರೆ.

ಆರೋಪಿತರ ಪೈಕಿ ಬಾಡಿಗೆ ಮನೆ ಪಡೆದುಕೊಂಡಿದ್ದ ರಾಮಚಂದ್ರ ದೇವಾಡಿಗ ಎಂಬಾತನು ತನ್ನ ಮನೆಯನ್ನೇ ಕೃತ್ಯಕ್ಕೆ ಅವಕಾಶ ಕಲ್ಪಿಸಿಕೊಟ್ಟು ದಂಧೆಗೆ ಪ್ರೇರಣೆ ನೀಡಿರುವುದಾಗಿ ತಿಳಿದುಬಂದಿದೆ. ಇದೀಗ ವಂಧಿತರ ವಿರುದ್ದ ಐಪಿಸಿ ಸೆಕ್ಷನ್ 3, 4,5 (ಡಿ) ಐ.ಟಿ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.

error: Content is protected !!

Join the Group

Join WhatsApp Group