ಕುಕ್ಕೆಯಲ್ಲಿ ಮನೆಮಾಡಿದ ಲಕ್ಷದೀಪೋತ್ಸವದ ಸಂಭ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ಡಿ.15:ಪವಿತ್ರ ಸುಪ್ರಸಿದ್ದ ನಾಗಕ್ಷೇತ್ರದಲ್ಲಿ ಷಷ್ಠಿ ಸಂಭ್ರಮ ಮನೆ ಮಾಡಿದೆ. ಡಿ,11ರಿಂದ ಮೂಲ ಮೃತಿಕಾ ಪ್ರಸಾದ ತೆಗೆಯುವ ಮೂಲಕ ಆರಂಭಗೊಂಡಿದೆ.ಇನ್ನು ಕಳೆದ ದಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷದೀಪೋತ್ಸವವು ಯಶಸ್ವಿಯಾಗಿ ಮೂಡಿ ಬಂದಿದೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಲಕ್ಷದೀಪೋತ್ಸವವು ಯಶಸ್ವಿಗೊಳಿಸಿದ್ದಾರೆ.

ಕುಕ್ಕೆ ಶ್ರೀ ದೇವಳದ ಹೊರಾಂಗಣದಲ್ಲಿ ಶ್ರೀ ಸುಬ್ರಹ್ಮಣ್ಯನನ್ನು ಪಲ್ಲಕ್ಕಿಯಲ್ಲಿ ಸುತ್ತುಗಳನ್ನು ಮುಗಿಸಿ, ಬಳಿಕ ರಥದೊಂದಿಗೆ ಬೀದಿಗಿಳಿದು ಹಲವು ಕಟ್ಟೆ ಪೂಜೆಗಳನ್ನು ಮುಗಿಸಿಕೊಂಡು ಕಾಶಿ ಕಟ್ಟೆ ಶ್ರೀ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆಗಳನ್ನು ಪೂರ್ಣಗೊಳಿಸಿ ನಂತರ ದೇವಸ್ಥಾನಕ್ಕೆ ಹಿಂದಿರುಗಿ ಸ್ವ-ಸ್ಥಾನಕ್ಕೆ ಮರಳಿಸಲಾಯಿತು. ಈ ವೇಳೆ ಸುಬ್ರಹ್ಮಣ್ಯದ ಮುಖ್ಯ ಕೇಂದ್ರಬಿಂದು, ಎಲ್ಲಾ ಭಕ್ತರ ನೆಚ್ಚಿನ ಆಕರ್ಷಣೀಯ ದೇವಳದ ಆನೆ ಯಶಸ್ವಿನಿ ಅಂಲಕಾರಗಳಿಂದ ಕಂಗೊಳಿಸುತ್ತಿದ್ದು, ಹೆಜ್ಜೆ ಹಾಕುತ ಸಂಬ್ರಮಿಸುತ್ತಿತ್ತು.ಇನ್ನು ಲಕ್ಷದೀಪೋತ್ಸವವು ಕಂಗೊಳಿಸುವಲ್ಲಿ ಯುವಾ ಬ್ರಿಗೇಡ್ ಸುಬ್ರಹ್ಮಣ್ಯ ಘಟಕದ ಸದಸ್ಯರು ಶ್ರಮಿಸಿದ್ದಾರೆ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪೂರ್ಣ ಗಾರ್ಡನ್ ಹಾಗೂ ಅಲ್ಲಿಯ ಅಸುಪಾಸಿನ ಪ್ರದೇಶಗಳಲ್ಲಿ ಯುವಾ ಬ್ರಿಗೇಡ್ ಸುಬ್ರಹ್ಮಣ್ಯ ಗಟಕದ ಸದಸದ್ಯರಿಂದ ತರ ತರನಾದ ದೀಪಲಂಕಾರವು ಅತ್ಯಂತ ಸುಂದರವಾಗಿ ಕಂಗೊಳಿಸುವಂತೆ ಮಾಡಿದ್ದಾರೆ.

Also Read  ವಿಧಾನಪರಿಷತ್ ಚುನಾವಣೆ - ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭರ್ಜರಿ ಗೆಲುವು

error: Content is protected !!
Scroll to Top