ಕಬಕ :ಬೈಕ್ ಅಪಘಾತ ➤ ಹಿರಿಯ ಆರ್.ಎಸ್.‌ಎಸ್ ಕಾರ್ಯಕರ್ತ ನಿಧನ

(ನ್ಯೂಸ್ ಕಡಬ) newskadaba.com ಕಬಕ, ಡಿ.15: ಕಬಕ ಬಳಿ ಡಿವೈಡರ್‍ಗೆ ಬೈಕ್ ಹೊಡೆದ ಪರಿಣಾಮ ಹಿರಿಯ ಆರ್‍ಎಸ್‍ಎಸ್ ಕಾರ್ಯಕರ್ತ ಮೃತಪಟ್ಟಿದ್ದಾರೆ. ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಇಂದು (ಡಿ15) ಮುಂಜಾನೆ ನಡೆದಿದೆ.

ಮೃತ ಪಟ್ಟವರನ್ನು ಆರ್‍ಎಸ್‍ಎಸ್ ನ ಹಿರಿಯ ಕಾರ್ಯಕರ್ತ ಬಂಟ್ವಾಳದ ನಿವಾಸಿ ವೆಂಕಟರಮಣ ಹೊಳ್ಳ ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಬಂಟ್ವಾಳಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಕಬಕ ಸಮೀಪದ ಪೋಳ್ಯದಲ್ಲಿ ಅಳವಡಿಸಿರುವ ಡಿವೈಡರ್ ಬಳಿ ಈ ಅಪಘಾತ ಸಂಭವಿಸಿದೆ.

Also Read  ಪುತ್ತೂರು: ಕೆ.ಪಿ.ಎಲ್.ಇ ಕಾಯಿದೆ ತಿದ್ದುಪಡಿ ವಿರೋದಿಸಿ ಖಾಸಗಿ ವೈದ್ಯರ ಮುಷ್ಕರ

 

error: Content is protected !!
Scroll to Top