ಕಡಬ: ಟಾಸ್ಕ್‌ಪೋರ್ಸ್ ಸಮಿತಿ ರಚನೆಯಲ್ಲಿ ಅನ್ಯಾಯ ► ದಲಿತ ಮುಖಂಡರಿಂದ ಖಂಡನೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ತಾಲೂಕು ಮಟ್ಟದಲ್ಲಿ ಅತಿಕ್ರಮಣ ಆಗಿರುವ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸುವ ಬಗ್ಗೆ ರಚಿಸಲಾದ ತಾಲೂಕುವಾರು ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ರಾಜಕೀಯ ದುರುದ್ದೇಶ ಅಡಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಮುಖಂಡ ಗುರುವಪ್ಪ ಕಲ್ಲುಗುಡ್ಡೆ ಆರೋಪಿಸಿದ್ದಾರೆ.

ನೂತನವಾಗಿ ರಚಿಸಿರುವ ಸಮಿತಿಯಲ್ಲಿ ಗಿರಿಧರ ನಾಯ್ಕ, ಪ್ರಹ್ಲಾದ್ 34ನೇ ನೆಕ್ಕಿಲಾಡಿ, ಸೋಮನಾಥ ರಾಮನಗರ, ಪವಿತ್ರಾ ಬಾಬು ಬಳಕ್ಕ ಆರ್ಯಾಪುರವರನ್ನು ನೇಮಿಸಲಾಗಿದೆ. ಆದರೆ ಇವರು ಯಾರು ದಲಿತ ಸಂಘಟನೆಯ ಕಾರ್ಯಕರ್ತರು ಆಗಿರುವುದಿಲ್ಲ. ಹಾಗಾಗಿ ಸಮಿತಿ ರಚನೆಯಲ್ಲಿ ರಾಜಕೀಯ ದುರುದ್ದೇಶ ಅಡಗಿದ್ದು, ಶಾಸಕಿ ಶಕುಂತಳಾ ಶೆಟ್ಟಿಯವರು ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಸದಸ್ಯರನ್ನು ಶಿಫಾರಸ್ಸು ಮಾಡಿರುತ್ತಾರೆ. ಯಾವುದೇ ದಲಿತ ಮುಖಂಡರಲ್ಲಿ ಚರ್ಚಿಸದೇ ತಮ್ಮ ಸ್ವಾರ್ಥಕ್ಕಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಸಮಿತಿಯನ್ನು ರಚಿಸಿದ್ದಾರೆ. ಈ ಡಿ.ಸಿ ಮನ್ನಾ ಭೂಮಿಯ ಹಕ್ಕನ್ನು ತಡೆಯುವುದಕ್ಕಾಗಿ ಹಲವು ದಲಿತ ಮುಖಂಡರು, ಕಾರ್ಯಕರ್ತರು ಹಲವಾರು ಹೋರಾಟ ಮಾಡಿದ್ದಾರೆ. ಆದರೆ ಈಗ ಸಮಿತಿಯಲ್ಲಿ ಆಯ್ಕೆಯಾದ ಸದಸ್ಯರು ಯಾವುದೇ ಡಿ.ಸಿ ಮನ್ನಾ ಭೂಹಕ್ಕಿಗಾಗಿ ಹೋರಾಟ ಮಾಡಿರುವುದಿಲ್ಲ ಮುಗ್ಧ ದಲಿತರನ್ನು ಹಿಡಿದುಕೊಂಡು ಡಿ.ಸಿ.ಮನ್ನಾ ಭೂಮಿಯನ್ನು ಪುನಃ ದಲಿತರಿಗೆ ವಂಚಿಸುವುದಾಕೋಸ್ಕರ ಶಕುಂತಲಾ ಶೆಟ್ಟಿಯವರು ಸಮಿತಿ ರಚಿಸಿದ್ದಾರೆ. ಆದುದರಿಂದ ಇದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

Also Read  ವಿಟ್ಲ :ಬೈಕ್ ಅಪಘಾತ ➤ ಖ್ಯಾತ ಪಾಕಪ್ರವೀಣ ಕಾಂತಡ್ಕ ಶಂಕರನಾರಾಯಣ ಭಟ್ ಮೃತ್ಯು

ದಲಿತ ಸಂಘರ್ಷ ಸಮಿತಿ ಮುಖಂಡರಾದ ಸುಂದರ ಕುಂಟ್ಯಾಡಿ, ರಾಜೇಶ್ ನಿಡ್ಡೋ, ವಸಂತ ಕುಬಲಾಡಿ, ವಿನೋದ್ ಕೆ. ಹೊಸ್ಮಠ, ಚಂದ್ರಹಾಸ ಬಲ್ಯ, ಓಮರ ಕಲ್ಲುಗುಡ್ಡೆ, ರಮೇಶ್ ಗುರಿಯಡ್ಕ, ರಾಘವ.ಕೆ. ಕಳಾರ, ಕುಶಲ ದೋಂತಿಲಡ್ಕ, ಲಿಂಗಪ್ಪ ಪಣೆಮಜಲು, ಶೀನಪ್ಪ ದೇರಾಜೆ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top