ಸೇವೆಯಿಂದಲೇ ಸಾರ್ಥಕತೆ ಪಡೆಯಿರಿ: ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.14: ಡಿ.13ರ ರವಿವಾರ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮೂಡಬಿದಿರೆ ಘಟಕದ ಗೃಹಕ್ಷಕರ ಪದೋನ್ನತಿ ಹಾಗೂ ಸನ್ಮಾನ ಕಾರ್ಯಕ್ರಮವು ಮೂಡಬಿದಿರೆಯ ಅಮರಾವತಿ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುದೀಪ್ ಎಂ.ವಿ., ಮೂಡಬಿದ್ರಿ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮತ್ತು ಕಾನೂನು ಸುವ್ಯವಸ್ಥಾಪಕರು, ದಯಾನಂದ ಪೈ ಮಾಜಿ ಘಟಕಾಧಿಕಾರಿಗಳು, ಪಡುಮಾರ್ನಾಡು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಡಾ|| ಮುರಳೀಕೃಷ್ಣ ಆರ್.ವಿ. ಮಕ್ಕಳ ತಜ್ಞರು, ಅಧ್ಯಕ್ಷರು ರೋಟರಿ ಚಾರಿಟೇಬಲ್ ಟ್ರಸ್ಟ್ ಮೂಡಬಿದಿರೆ ಇವರುಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮೂಡಬಿದಿರೆ ಘಟಕದ ಗೃಹರಕ್ಷಕರಾದ ಎಂ. ಬೂಬ ಕುಮಾರ್, ಲಾರೆನ್ಸ್ ಡಿ’ಸೋಜಾ, ಚಂದ್ರಶೇಖರ್ ಮತ್ತು ಸಿ. ವೀರಪ್ಪ ಇವರುಗಳಿಗೆ ಪದೋನ್ನತಿ ನೀಡಿ ಗೌರವಿಸಲಾಯಿತು. ಕೊರೋನಾ ಸಂದರ್ಭ ಸೇವೆಯನ್ನು ಪರಿಗಣಿಸಿ ಗೃಹರಕ್ಷಕರಾದ ರಾಮಚಂದ್ರ ನಾಯ್ಕ್, ಆಂಟೋನಿ ಮೆಲ್ವಿನ್ ಝೋಝೋರೊಯೋ, ಲತೀಶ್, ಆಂಡ್ರ್ಯು ಡಿ’ಸೋಜಾ ಹಾಗೂ ಮಾಜಿ ಘಟಕಾಧಿಕಾರಿ ಅಣ್ಣಿ ದೇವಾಡಿಗರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಗಳಾದ ಮಕ್ಕಳ ತಜ್ಞ ಡಾ|| ಮುರಳೀಕೃಷ್ಣ ಆರ್.ವಿ. ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಸಮಾeದ ಸುರಕ್ಷತೆಯನ್ನು ಕಾಪಾಡಿದ ತಮ್ಮ ಸೇವೆ ಅಮೋಘವಾದುದು ಎಂದರು.

Also Read  ➤ಬೀದಿ ನಾಯಿಗಳ ದಾಳಿಗೆ ಸೋದರರು ಬಲಿ

ಪದೋನ್ನತಿ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ರವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಗೃಹರಕ್ಷಕರು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಗೃಹರಕ್ಷಕರಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಸಮಾಜದಲ್ಲಿ ಸಮವಸ್ತ್ರ ಧರಿಸಿ ಕೆಲಸ ಮಾಡುವಾಗ ಜನ ನಿಮ್ಮನ್ನು ಗುರುತಿಸುತ್ತಾರೆ. ಗೃಹರಕ್ಷಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಪಾಲಿಸದಿದ್ದರೆ ಜನರೂ ಕೂಡಾ ಪಾಲಿಸುವುದಿಲ್ಲ. ಮೊದಲು ತಾವು ಕಾನೂನುಗಳನ್ನು ಪಾಲಿಸುವುದು ಅಗತ್ಯ. ಸಮಾಜ ಗುರುತಿಸದಿದ್ದರೂ ಇಲಾಖೆ ಗುರುತಿಸಿ ಸನ್ಮಾನಿಸಿದೆ. ಪದೋನ್ನತಿ ಹೊಂದಿರುವ ಗೃಹರಕ್ಷಕರ ಜವಾಬ್ದಾರಿ ಹೆಚ್ಚಿದ್ದು, ಹೆಚ್ಚಿನ ಸೇವೆ ಮಾಡುವಂತಾಗಲಿ ಎಂದರು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಹಾಗೂ ಕಾನೂನು ಪಾಲನೆಯಲ್ಲಿ ಮಾದರಿ ವ್ಯಕ್ತಿಗಳು, ಪೊಲೀಸರ ಜತೆಗೂಡಿ ಕೊರೋನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿರುವ ಕರ್ತವ್ಯ ನಿಷ್ಠೆ ಮೆಚ್ಚುವಂತದ್ದು ಎಂದು ಪದೋನ್ನತಿ ಹೊಂದಿದ ಮತ್ತು ಸನ್ಮಾನ ಸ್ವೀಕರಿಸಿದ ಗೃಹರಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಲತೇಶ್ ಸ್ವಾಗತಿಸಿದರು. ಶ್ರೀ ಗುರುಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಶ್ವಿನಿ ವಂದಿಸಿದರು. ಮತ್ತು ಶ್ರೀ ದಯಾನಂದ ಪೈ, ಶ್ರೀ ವಿಜಯಕುಮಾರ್, ಮೂಡಬಿದಿರೆ ಘಟಕದ ಘಟಕಾಧಿಕಾರಿ ಪಾಂಡಿರಾಜ್ ಹಾಗೂ ಮೂಡಬಿದಿರೆ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.

error: Content is protected !!
Scroll to Top