(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.14: ದ್ವೀಪ ರಾಷ್ಟ್ರಗಳಲ್ಲಿ ಒಂದಾದ ಮಾಲ್ದೀವ್ಸ್ ಗೆ ಮಂಗಳೂರು ಹಳೆ ಬಂದರ್‌ನಿಂದ ಪ್ರಥಮ ಬಾರಿಗೆ ಸರಕು ಸಾಗಾಟ ನೌಕೆಯು ಡಿ.14ರ ಇಂದು ಹೊರಡಲಿದೆ.
ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಮತ್ತು ಹಣ್ಣು ಹಂಪಲು ಸಾಗಾಟ ಮಾಡಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ರವಿವಾರ ಕ್ರೇನ್‌ಗಳ ಮೂಲಕ ಸಾಮಗ್ರಿಗಳನ್ನು ಲೋಡ್ ಮಾಡಲಾಯಿತು. ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರೀನಿವಾಸನ್, ವಿಘ್ನೇಶ್ ಪ್ರಥಮ ಯಾನದಲ್ಲಿ ತೆರಳಲಿದ್ದಾರೆ.ಲಕ್ಷದ್ವೀಪದ ಕಡಂಬತ್ತ್‌ಕಾರ್‌ಗೆ ಸೇರಿದ ಎಂಎಸ್‌ವಿ ನೂರ್ ಎ ಅಲ್ ಕದರಿ ಹೆಸರಿನ ಈ ನೌಕೆಯನ್ನು ಚರಣ್‌ದಾಸ್ ವಿ.ಕರ್ಕೇರ ಬಾಡಿಗೆಗೆ ಪಡೆದುಕೊಂಡು, ಸಾಮಾನು ಸಾಗಾಟ ಮಾಡುತ್ತಿದ್ದಾರೆ.