ಕಾರ್ಕಳ: ಪೊಲೀಸರ ಅತಿಥಿಯಾದ ಗೋಕಳ್ಳರಿಗೆ ನೆರವಾಗುತ್ತಿದ್ದ ಅನಿಲ್ ಪ್ರಭು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ.14: ಕಳವುಗೈದ ಹಸುಗಳನ್ನು ಕೊಂದು ಅದರ ಮಾಂಸ ಮಾರಾಟ ಮಾಡುತ್ತಿದ್ದ ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ, ತೆಳ್ಳಾರು ರಸಯ ನಿವಾಸಿ ಅನಿಲ್ ಪ್ರಭುನನ್ನು ಪೊಲೀಸರು ಬಂಧಿಸಿದ್ದಾರೆ.

 

ನವಂಬರ್ 6ರಂದು ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದ ಹುಡ್ಕೋ ಕಾಲನಿಯ ಮುಹಮ್ಮದ್ ಯಾಸೀನ್ ಎಂಬಾತನನ್ನು ತಡೆದಿದ್ದರು. ಆದರೆ, ಅರ್ಧದಲ್ಲಿಯೇ ಪರಾರಿಯಾಗಿದ್ದ ಆತನ ವಾಹನ ಪರಿಶೀಲನೆ ನಡೆಸಿದ ಪೊಲೀಸರಿಗೆ ಪ್ಲಾಸ್ಟಿಕ್ ಚೀಲದೊಳಗೆ ದನದ ತಲೆ ಹಾಗೂ ಮಾಂಸ ಪತ್ತೆಯಾಗಿತ್ತು. ಈ ಕುರಿತು ಮುಹಮ್ಮದ್ ಯಾಸೀನ್ ಹಾಗೂ ಜಯಂತಿನಗರದ ಜೀರ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ದನಗಳನ್ನು ಕಳವುಗೈದು ಕೊಂದು ಮಾಂಸ ಮಾರಾಟ ಜಾಲದವರಿಗೆ ಬೆನ್ನೆಲುಬಾಗಿದ್ದ ಅನಿಲ್ ಪ್ರಭು, ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ ಎಂದು ವಾಗ್ದಾನ ನೀಡಿ ಅವರಿಂದ ಪಾಲು ಪಡೆಯುತ್ತಿದ್ದನೆಂದು ತನಿಖೆಯ ವೇಳೆ ಮುಹಮ್ಮದ್ ಯಾಸೀನ್ ಬಾಯಿ ಬಿಟ್ಟಿದ್ದಾನೆ.

Also Read  ನೆಲ್ಯಾಡಿ: ಬೃಹತ್ ಆಯಿಲ್ ದಂಧೆ ಭೇದಿಸಿದ ಪೊಲೀಸರು ➤ ನಾಲ್ವರ ಬಂಧನ

 

error: Content is protected !!
Scroll to Top