ಹರಿಹರ ಪಲ್ಲತಡ್ಕದಲ್ಲಿ ಭೀಕರ ಶಬ್ದ ➤ ಬೆಚ್ಚಿ ಬಿದ್ದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.14: ಡಿ.13 ರ ಕಳೆದ  ರಾತ್ರಿ ಸಮಯದಲ್ಲಿ ಹರಿಹರ ಪಲ್ಲತಡ್ಕದಲ್ಲಿ ಭೀಕರ ಶಬ್ದವೊಂದು ಕೇಳಿ ಬಂದಿದ್ದು ಜನರೆಲ್ಲ ಭಯಬೀತರಾಗಿ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಇನ್ನು ಕೆಲವರು ಶಬ್ದದ ಮೂಲ ಹುಡುಕಲು ಮುಂದಾಗಿದ್ದಾರೆ.

ರಾತ್ರಿ ಸುಮಾರು ಹತ್ತು ಗಂಟೆ ವೇಳೆಗೆ ಭೂಮಿ ಬಾಯಿ ಬಿಟ್ಟಂತೆ ಭಾರೀ ಶಬ್ದವೊಂದು ಕೇಳಿ, ಹರಿಹರ ಪಲ್ಲತಡ್ಕದ ಮಂದಿಯೆಲ್ಲ ಮನೆಯಿಂದ ಹೊರ ಬಂದಿದ್ದಾರೆ.ನೆಲ ಅದುರಿದಂತೆ ಭಾಸವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Also Read  ಸುಳ್ಯ : ವಿವಾಹದಲ್ಲಿ ಭಾಗವಹಿಸಿದವರಿಗೆ ಹೋಂ ಕ್ವಾರಂಟೇನ್

 

error: Content is protected !!