ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನ ➤ ಮಂಡಿಯೂರಿ, ಅತ್ತು ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ತೆಲುಗು ನಟ ವಿಜಯ್ ರಂಗರಾಜು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.13: ಸ್ಯಾಂಡಲ್​ವುಡ್​ ಕಂಡ ದಿಗ್ಗಜ ನಟ, ದಾದಾ, ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ಈಗ ಮಂಡಿಯೂರಿ, ಅತ್ತು ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ನನ್ನದು ತಪ್ಪಾಯಿತು. ಬಾಯಿತಪ್ಪಿ ಆರೀತಿ ಮಾತನಾಡಿದ್ದೆ. ನನ್ನನ್ನು ಕ್ಷಮಿಸಿಬಿಡಿ ಎಂದು ಕೈ ಮುಗಿದು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ವಿಜಯ್ ರಂಗರಾಜು ವಿಷ್ಟುದಾದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಬೆನ್ನಲ್ಲೇ ಅವರ ವಿರುದ್ಧ ಇಡೀ ಸ್ಯಾಂಡಲ್​ವುಡ್ ತಿರುಗಿಬಿದ್ದಿತ್ತು. ಕನ್ನಡದ ಕಿರಿಯ ಸ್ಟಾರ್ ನಟರಿಂದ ಹಿಡಿದು ಹಿರಿಯರ ವರೆಗೆ ವಿಜಯ್ ಹೇಳಿಕೆ ಹಿಂಪಡೆಯುವಂತೆ ಆಗ್ರಯಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಛಾಪು ಮೂಡಿಸಿದ್ದ ನಟ ಡಾ. ವಿಷ್ಣುವರ್ಧನ್​ ಅಣ್ಣಾವ್ರ​ ನಂತರದ ಸ್ಥಾನದಲ್ಲಿ, ಇಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಇಂತಹ ಮೇರುನಟನನ್ನು ತೆಲುಗು ಪೋಷಕ ನಟ ವಿಜಯ್ ರಂಗರಾಜು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಪಮಾನ ಮಾಡಿದ್ದರು.ಕನ್ನಡಿಗರ ಆಕ್ರೋಶ ತಾರಕಕ್ಕೇರುತ್ತಿದೆ ಎಂಬೊತ್ತಿಗೆ ವಿಜಯ್ ಕ್ಷಮೆ ಕೇಳಿದ್ದಾರೆ. ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಂಗರಾಜು, ರಾಜಕುಮಾರ್ ಅವರ ಮಗ ಪುನೀತ್, ಕಿಚ್ಚ ಸುದೀಪ್, ಉಪೇಂದ್ರ ಅವರೇ ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

Also Read  ಸ್ಯಾಂಡಲ್ ವುಡ್- ಲೈಂಗಿಕ ಕಿರುಕುಳದ ಕುರಿತ ತನಿಖೆಗೆ ಆಗ್ರಹ- ಸಮಿತಿ ರಚನೆಗೆ ಸಿಎಂಗೆ ಮನವಿ ಸಲ್ಲಿಸಿದ ‘FIRE’

 

‘ನನಗೆ ನನ್ನ ತಪ್ಪಿನ ಅರಿವಾಗಿದೆ, ನನ್ನ ತಪ್ಪಿಗೆ ಶಿಕ್ಷೆಯನ್ನೂ ಅನುಭವಿಸುತ್ತಿದ್ದೇನೆ. ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ವಿಷ್ಣುವರ್ಧನ್ ಬಗ್ಗೆ ಹಾಗೆ ಮಾತನಾಡಬಾರದಿತ್ತು, ನನ್ನನ್ನು ಕ್ಷಮಿಸಿಬಿಡಿ’ ಎಂದು ಅಂಗಲಾಚಿದ್ದಾರೆ.

error: Content is protected !!
Scroll to Top