ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭ ➤ ಡಿ.14ರಂದು ಶ್ರೀ ದೇವರ ಲಕ್ಷದೀಪೋತ್ಸವ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.13: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.14ರಂದು ಶ್ರೀ ದೇವರ ಲಕ್ಷದೀಪೋತ್ಸವ ನೆರವೇರಲಿದೆ. ಇದಕ್ಕೆ ಸರ್ವ ಭಕ್ತರ ಸಹಕಾರ ಅಗತ್ಯ. ಲಕ್ಷ ದೀಪೋತ್ಸವದಂದು ಲಕ್ಷ ದೀಪಗಳು ಉರಿದು ಕ್ಷೇತ್ರವು ಹಣತೆ ಬೆಳಕಿನಿಂದ ಪ್ರಜ್ವಲಿಸಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್‌.ಅಂಗಾರ ಹೇಳಿದರು.

ಶ್ರೀ ದೇವಳದ ಆಡಳಿತ ಕಚೇರಿ ಮೇಲ್ಮಹಡಿಯಲ್ಲಿ ಶನಿವಾರ ನಡೆದ ಸಾರ್ವಜನಿಕರ ಮತ್ತು ವರ್ತಕರ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಣ್ಣಿನ ಹಣತೆಯ ಲಕ್ಷ ದೀಪಗಳನ್ನು ರಥಬೀದಿಯಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ತನಕ ಹಾಗೂ ಸವಾರಿ ಮಂಟಪದ ತನಕ, ಕುಮಾರಧಾರ, ಆದಿಸುಬ್ರಹ್ಮಣ್ಯ ಪ್ರದೇಶದಲ್ಲಿ ಹಚ್ಚಲಾಗುವುದು. ಹಣತೆಯನ್ನು ಅಚ್ಚುಕಟ್ಟಾಗಿ ಇರಿಸಿ ದೇವರ ಉತ್ಸವದ ಸಂದರ್ಭ ಉರಿಸಿ ಸಹಕರಿಸಬೇಕು ಎಂದಿದ್ದಾರೆ.

Also Read  ಮೂಡಬಿದ್ರಿ ಘಟಕದ ನಿವೃತ್ತ ಗೃಹರಕ್ಷಕ ನಾರಾಯಣ ಗೌಡ ಇವರಿಗೆ ಸನ್ಮಾನ

 

 

error: Content is protected !!
Scroll to Top