ಮಂಗಳೂರು: ಬಿಜೆಪಿ ಬೆಂಬಲಿತ ಗ್ರಾ.ಪಂ ಅಭ್ಯರ್ಥಿ ಮೇಲೆ ಸುತ್ತಿಗೆಯಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.13: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮದರಸ ಧಾರ್ಮಿಕ ಗುರುವಿಗೆ ತಂಡವೊಂದು ಸುತ್ತಿಗೆಯಲ್ಲಿ ತಲೆಗೆ ಬಡಿದು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರು ಹೊರವಲಯ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ತಡರಾತ್ರಿ ವೇಳೆ ನಡೆದಿದೆ.

 

 

ಅಸೈಗೋಳಿ ನಿವಾಸಿ ಹನೀಫ್ ನಿಜಾಮಿ (40) ಕೊಲೆಯತ್ನಕ್ಕೆ ಒಳಗಾದವರು. ಇವರಿಗೆ ಅಸೈಗೋಳಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಕರೀಂ ನೇತೃತ್ವದ ತಂಡ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.ಹನೀಫ್ ನಿಜಾಮಿ ಉಪ್ಪಳ, ಮಂಜೇಶ್ವರ, ಪೈವಳಿಕೆ ಹಾಗೂ ಮಂಜನಾಡಿ ಭಾಗಗಳಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.ತಮ್ಮ ಮನೆಯಿರುವ ಮಂಜನಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು.ಆದರೆ, ಈ ಬಾರಿ ನಾಲ್ವರು ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅವರ ಪರ ಪ್ರಚಾರ ಕಾರ್ಯದಲ್ಲಿ ನಿಜಾಮಿ ಭಾಗವಹಿಸಿದ್ದರು. ಇದೇ ದ್ವೇಷದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊಲೆಗೆ ಯತ್ನಿಸಿರುವುದಾಗಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡ ಫಝಲ್ ಅಸೈಗೋಳಿ ಆರೋಪಿಸಿದ್ದಾರೆ.

Also Read  ಡಿ.ಕೆ. ಶಿವಕುಮಾರ್ ಪುತ್ರಿಯ ಮದುವೆಗೆ ಡೇಟ್ ಫಿಕ್ಸ್

 

 

error: Content is protected !!
Scroll to Top