ಗ್ರಾ.ಪಂ.ಚುನಾವಣೆ: ಮತದಾರರಿಗೆಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿದೆ. ಮೊದಲನೇ ಹಂತದ ಮತದಾನವು ಡಿಸೆಂಬರ್ 22 ರಂದು ಹಾಗೂ ಎರಡನೇ ಹಂತದ ಮತದಾನವು ಡಿಸೆಂಬರ್ 27 ರಂದು ನಡೆಯಲಿದೆ.


ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್(ಚುನಾವಣೆ ನಡೆಸುವ ನಿಯಮಗಳು), 1993ರ ನಿಯಮ 52ರಂತೆ ಮತದಾರನ ಎಡ ತೋರುಬೆರಳಿಗೆ ಅಥವಾ ರಾಜ್ಯ ಚುನಾವಣಾ ಆಯೋಗವು ನಿರ್ದಿಷ್ಟಪಡಿಸಿದ ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಮಾಡಬೇಕಾಗುತ್ತದೆ.ಇತ್ತೀಚಿಗೆ ಕೆಲವು ವಿಧಾನಸಭಾ ಉಪಚುನಾವಣೆಗಳು ಹಾಗೂ ವಿಧಾನಪರಿಷತ್ತಿಗೆ ಚುನಾವಣೆಗಳು ಕೆಲವು ಸಹಕಾರ ಸಂಘದ ಚುನಾವಣೆಗಳು ನಡೆದಿದ್ದು, ಮತದಾರರಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗಿರುವುದರಿಂದ ಪ್ರಸ್ತುತ ನಡೆಯುತ್ತಿರುವ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಅಳಿಸಲಾಗದ ಶಾಯಿಯನ್ನುಮತದಾರನ ಎಡಗೈಯ ಹೆಬ್ಬೆರಳಿಗೆ ಹಚ್ಚುವಂತೆ ಚುನಾವಣಾ ಆಯೋಗವು ನಿರ್ಧಿಷ್ಟ ಪಡಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅತಿಥಿ ಶಿಕ್ಷಕರು/ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

 

error: Content is protected !!
Scroll to Top