ಬಿಳಿನೆಲೆ -ಕೈಕಂಬ :ರಾಂಪತ್ರೆ ಕೊಯ್ಯಲು ಕಾಡಿಗೆ ತೆರಳಿದ್ದ ವ್ಯಕ್ತಿ ವಾರದ ಬಳಿಕ ಶವವಾಗಿ ಪತ್ತೆ ➤ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಡಿ.12: ರಾಂಪತ್ರೆ ಕೊಯ್ಯಲು ಕಾಡಿಗೆ ತೆರಳಿದ್ದ ವ್ಯಕ್ತಿ ವಾರದ ಬಳಿಕ ಶವವಾಗಿ ಪತ್ತೆಯಾದ ಘಟನೆ ಕಡಬ ತಾಲೂಕಿನ ಬಿಳಿನೆಯಲ್ಲಿ ವರದಿಯಾಗಿದೆ.  ಬಿಳಿನೆಲೆ ಗ್ರಾಮದ ಮೂಳೆ ನಿವಾಸಿ ವೆಂಕಪ್ಪ ಗೌಡ ಹಾಗೂ ಬಾಲಚಂದ್ರ ಎಂಬುವರು ಡಿ.05 ರಂದು ರಾಂಪತ್ರೆ ಕೊಯ್ಯಲು ಭಾಗ್ಯ ಮಲೆ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ.  ತೆರಳುವ ಮುನ್ನ ಡಿ.08 ಅಥವಾ ಡಿ.09 ರಂದು ಕಾಡಿನಿಂದ ಹಿಂತಿರುಗಿ ಬರುವುದಾಗಿ ಮನೆಯವರಲ್ಲಿ ತಿಳಿಸಿ ಪ್ರತಿ ವರ್ಷದಂತೆ ಈ ಭಾರಿಯು ತೆರಳಿದ್ದಾರೆ.

ಆದರೆ ಡಿ.11 ರ ವರೆಗೆ ಕಾಡಿಗೆ ತೆರಳಿದವರು ವಾಪಾಸ್ಸಾಗದೇ ಇದ್ದುದರಿಂದ ಊರಿನವರೆಲ್ಲ ಸೇರಿ ಕಳೆದ ದಿನ ಭಾಗ್ಯ ಮಲೆಯಲ್ಲಿ ಹುಡುಗಾಟ ನಡೆಸಿದ್ದಾರೆ. ಈ ವೇಳೆ ಕೋಟೆ ಹೊಳೆಯಲ್ಲಿ ವೆಂಕಪ್ಪ ಗೌಡರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಿಯ ಮಾಹಿತಿ ಪ್ರಕಾರ ಇನ್ನೋರ್ವ ವ್ಯಕ್ತಿ ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪತಿಯ ಸಾವಿನ ಬಗ್ಗೆ ಸಂಶಯಗೊಂಡಿರುವ ಪತ್ನಿ ವಿಜಯಲಕ್ಷ್ಮಿ ಅವರು ಕಡಬ ಠಾಣೆಗೆ ದೂರು ನೀಡಿದ್ದು ಸಿ ಆರ್ ಪಿ ಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಡಬ ಠಾಣಾಧಿಕಾರಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಕೆಲಸದ ಸಮಸ್ಯೆಗಳಿಗೆ ಹೀಗೆ ಮಾಡಿ.

 

 

 

error: Content is protected !!
Scroll to Top