ವಾಣಿಜ್ಯ ಕಟ್ಟಡಕ್ಕೆ ಡೋರ್ ನಂಬ್ರ ನೀಡಲು ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ►ಅ.13 ಶುಕ್ರವಾರದಿಂದ ಪಂಚಾಯತ್ ಎದುರು ಸತ್ಯಾಗ್ರಹ: ತೋಮ್ಸನ್ ಕೆ.ಟಿ.

(ನ್ಯೂಸ್ ಕಡಬ) newskadaba.com .ಕಡಬ, ಅ.10. ಬಿಳಿನೆಲೆ ಗ್ರಾಮ ಪಂಚಾಯತಿಯ ನೆಟ್ಟಣ ಸಮೀಪದ ಮೇರೊಂಜಿ ಎಂಬಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ಗ್ರಾಮ ಪಂಚಾಯತಿಯಿಂದ ಡೋರ್ ನಂಬರ್ ನೀಡದೆ ಇರುವುದರಿಂದ ವಿದ್ಯುತ್ ಸಂಪರ್ಕಕ್ಕೆ ತೊಂದರೆ ಉಂಟಾಗಿದ್ದು, ಅಕ್ಟೋಬರ್ 12ರ ಗುರುವಾರದೊಳಗಡೆ ಡೋರ್ ನಂಬರ್ ನೀಡದೆ ಇದ್ದಲ್ಲಿ 13 ಶುಕ್ರವಾರದಿಂದ ಪಂಚಾಯತ್ ಎದುರುಗಡೆ ಸತ್ಯಾಗ್ರಹ ಮಾಡಲಿದ್ದೇನೆ ಎಂದು ಕಟ್ಟಡ ಮಾಲಕ ಥೋಮ್ಸನ್ ಕೆ.ಟಿ ಹೇಳಿದ್ದಾರೆ.

ಅವರು ಮಂಗಳವಾರದಂದು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಮೇರೊಂಜಿ ಎಂಬಲ್ಲಿರುವ ವರ್ಗ ಜಮೀನನ್ನು ಭೂಪರಿವರ್ತಿಸಿ ಕಟ್ಟಡ ನಿರ್ಮಿಸಿದ್ದು, ಎಲ್ಲಾ ದಾಖಲೆಗಳನ್ನು ನಕ್ಷೆ ಸಮೇತ ಬಿಳಿನೆಲೆ ಗ್ರಾಮ ಪಂಚಾಯತ್ಗೆ ನೀಡಿದ್ದರೂ ಪಂಚಾಯತಿಯಿಂದ ಡೋರ್ ನಂಬ್ರ ನೀಡಿರುವುದಿಲ್ಲ. ಈ ಹಿಂದೆ ಕಟ್ಟಡ ನಿರ್ಮಾಣಕ್ಕೂ ಪರವಾನಿಗೆ ನೀಡದೆ ಸತಾಯಿಸಿದ್ದು, ಗ್ರಾಮ ಪಂಚಾಯತಿನಲ್ಲಿ ಸತ್ಯಾಗ್ರಹ ಮಾಡಿದ ನಂತರ ಲೈಸನ್ಸ್‌ ನೀಡಿರುತ್ತಾರೆ. ಇದೀಗ ವಿದ್ಯುತ್ ಸಂಪರ್ಕ ಪಡೆಯಲು ಡೋರ್ ನಂಬ್ರ ನೀಡುವಂತೆ ಗ್ರಾಮ ಪಂಚಾಯತಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದರು.

Also Read  ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಮೂವರಲ್ಲಿ ಕೊರೋನಾ ಪಾಸಿಟಿವ್..!!

ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಅಶೀಶ್ ತೋಮ್ಸನ್, ಅಜೀಶ್ ತೋಮ್ಸನ್ ಉಪಸ್ಥಿತರಿದ್ದರು.

error: Content is protected !!
Scroll to Top