ಪುತ್ತೂರು: ಕೋಟಿ ಚೆನ್ನಯ್ಯರ ತಾಯಿ, ದೇಯಿಬೈದೇತಿಗೆ ಅವಮಾನ ► ಬೃಹತ್ ಪಾದಯಾತ್ರೆಗೆ ಚಾಲನೆ

 (ನ್ಯೂಸ್ ಕಡಬ) newskadaba.com ಪುತ್ತೂರು, ಅ.10. ಕೋಟಿ ಚೆನ್ನಯ್ಯರ ತಾಯಿ ದೇಯಿಬೈದೇತಿ ಅವರ ವಿಗ್ರಹವನ್ನು ಅವಮಾನಿಸಿ ಹಿಂದೂ ಸಮಾಜದ ಭಕ್ತರ ಭಾವನೆಗೆ ವಿರುದ್ಧವಾಗಿ ವರ್ತಿಸಿದ ಮತಾಂಧ ವ್ಯಕ್ತಿಗಳ ವಿರುದ್ಧ ಮತ್ತು ಜಿಲ್ಲೆಯ ಶಕ್ತಿ ಕೇಂದ್ರಗಳ ರಕ್ಷಣೆಗಾಗಿ ನಡೆಸಲು ಉದ್ದೇಶಿಸಿರುವ ಬೃಹತ್ ಪಾದಯಾತ್ರೆ ಆರಂಭಗೊಂಡಿದೆ.

ಪಾದಯಾತ್ರೆಗೂ ಮುನ್ನ ಬೆಳಿಗ್ಗೆ 8 ಗಂಟೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವರಿಗೆ ಹಾಗೂ ನಾರಾಯಣ ಗುರು ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿದರು.

ಮಹಾಲಿಂಗೇಶ್ವರ ದೇವಾಸ್ಥಾನದ ಗದ್ದೆಯಲ್ಲಿ ಪಾದಯಾತ್ರೆಗೆ ತೆಂಗಿನ ಕಾಯಿ ಒಡೆಯುವ ಮೂಲಕ ಬಿಜೆಪಿ ಪುತ್ತೂರು ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ಬಳಿಕ ದೇವಸ್ಥಾನ ಗದ್ದೆಯಿಂದ ಹೊರಟ ಪಾದಾಯಾತ್ರೆ ದೇಯಿ ಬೈದೇತಿ ಔಷದವನದ ತನಕ ಸಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜೀವಂಧರ್ ಜೈನ್, ಉಮಾನಾಥ್ ಕೊಟ್ಯಾನ್, ಆರ್‌.ಸಿ.ನಾರಾಯಣ, ಸುಳ್ಯ ಶಾಸಕ ಅಂಗಾರ್, ಮಾಜಿ ಸಚಿವ ಕ್ರಷ್ಣ ಪಾಲೆಮಾರ್, ಗಣೇಶ್ ಕಾರ್ಣಿಕ್, ಭಾರತಿ ಶೆಟ್ಟಿ, ಪೂಜಾ ಪೈ, ಸತ್ಯಜೀತ್ ಸುರತ್ಕಲ್, ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕ್ರಷ್ಣ, ಮಾಜಿ ಶಾಸಕ ರುಕ್ಮಯ ಪೂಜಾರಿ ಮತ್ತಿತರರ ಸಹಿತ ಅನೇಕ ಸ್ಥಳೀಯ ರಾಜಕೀಯ ಮುಖಂಡರುಗಳು, ಧಾರ್ಮಿಕ ನಾಯಕರುಗಳು ಉಪಸ್ಥಿತರಿದ್ದರು.

Also Read  ಮೈಮೇಲೆ‌ ಗ್ರಾನೈಟ್ ಬಿದ್ದು ಯುವಕ ಮೃತ್ಯು

ಪಾದಯಾತ್ರೆಯಲ್ಲಿ ಕೋಟಿಚೆನ್ನಯ ವೀರ ಪುರುಷರ ಜೊತೆ ತಾಯಿ ದೇಯಿ ಬೈದೆತಿಯ ಹಾಗೂ ಮಹಾಲಿಂಗೇಶ್ವರ ದೇವರ ಭಾವ ಚಿತ್ರ ಅಳವಡಿಸಿದ ವಾಹನ, ಸಿಂಹ ವೇಷ ಕುಣಿತ, ಕೇರಳದ ಚೆಂಡೆ, ನಾಸಿಕ್ ಬ್ಯಾಂಡ್ ನ ವಿಶೇಷ ಆಕರ್ಷಣೆಯೊಂದಿಗೆ ಸಾಗಿತು. ಪಾದಯಾತ್ರೆ ಹೋಗುವವರಿಗೆ ದರ್ಬೆಯಲ್ಲಿ ಪಾನೀಯದ ವ್ಯವಸ್ಥೆಯನ್ನು ಬಿ.ಎಂಎಂ.ಎಸ್ ರಿಕ್ಷಾ ಚಾಲಕ ಮಾಲಕರಿಂದ ಮಾಡಲಾಯಿತು.

error: Content is protected !!
Scroll to Top