ಗಂಡನ ಮನೆಯವರ ಕಿರುಕುಳ ► ದೇವಿಯ ವಿಗ್ರಹಕ್ಕೆ ತ್ರಿಶೂಲದಿಂದ ಹೊಡೆದು ದೇವರ ಮೇಲೆ ಸೇಡು ತೀರಿಸಿಕೊಂಡ ಮಹಿಳೆ!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.9. ಗಂಡ ಮತ್ತು ಆತನ ಮನೆಯವರ ಟಾರ್ಚರ್‍ನಿಂದಾಗಿ ರೊಚ್ಚಿಗೆದ್ದ ಮಹಿಳೆಯೊಬ್ಬರು  ದೇವಾಲಯದ ಗರ್ಭಗುಡಿಗೆ ನುಗ್ಗಿ ದೇವಿಯ ವಿಗ್ರಹದ ಮೇಲೆಯೇ ದಾಳಿ ಮಾಡಿದ ಘಟನೆ ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ನಿಮಿಷಾಂಬಾ ದೇವಿಯ ದೇವಾಲಯದಲ್ಲಿ ಸೋಮವಾರ ನಡೆದಿದೆ.

ನಿಮಿಷಾಂಬಾ ದೇವಿ ದೇವಾಲಯದಲ್ಲಿ ಎಂದಿನಂತೆ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಗರ್ಭಗುಡಿಗೆ ನುಗ್ಗಿದ್ದಾರೆ. ಬಳಿಕ ದೇವಿಯ ತ್ರಿಶೂಲ ಕೈಗೆ ತೆಗೆದುಕೊಂಡು ದೇವಿಗೇ ಹೊಡೆದಿದ್ದಾರೆ. ಇವರನ್ನು ಹಿಡಿಯಲು ಹೋದ ಅರ್ಚಕರಿಗೆ ಹಾಗೂ ನೆರೆದಿರುವ ಭಕ್ತರಿಗೆ ತ್ರಿಶೂಲ ತೋರಿಸಿ ಬೆದರಿಸಿದ್ದಾರೆ.

Also Read  ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 10 ಮಂದಿಯಲ್ಲಿ ಕೋವಿಡ್ ದೃಢ

ನಿನ್ನ ನಂಬಿಕೊಂಡಿದ್ದೆ, ಪೂಜಿಸುತ್ತಿದ್ದೆ ಆದರೆ ನನಗೇ ನ್ಯಾಯ ಕೊಡದೆ ಮೋಸ ಮಾಡಿದ್ದೀಯ ಎಂದು ಆ ಮಹಿಳೆ ಕೂಗಾಡಿದ್ದಾರೆ. ನಂತರ ಭಕ್ತರು ಸೇರಿ ಈ ಮಹಿಳೆಯನ್ನು ಹಿಡಿದು, ಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಲತಃ ಹೊಳೆನರಸೀಪುರದವರಾದ ಈ ಮಹಿಳೆಯನ್ನು ಶಾಂತಲಾ ಎನ್ನಲಾಗಿದ್ದು, ಕೌಟುಂಬಿಕ ಕಾರಣಗಳಿಂದ ನೊಂದಿದ್ದರು ಎಂಬುವುದಾಗಿ ತಿಳಿದುಬಂದಿದೆ.

 

error: Content is protected !!
Scroll to Top