ಅ.18 ರಂದು: ಸಬಳೂರು ಶ್ರೀ ರಾಮ ಭಜನಾ ಮಂದಿರದಲ್ಲಿ ► ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಅ.9. ಪುತ್ತೂರು ತಾಲೂಕು ಕೊೖಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಅಕ್ಟೋಬರ್.18 ರಂದು ಶ್ರೀ ರಾಮ ಭಜನಾ ಮಂದಿರದಲ್ಲಿ ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡೋತ್ಸವ, ಹಾಗೂ ಧಾರ್ಮಿಕ  ಸಭೆಯು ನಡೆಯಲಿದೆ.


ಬೆಳಿಗ್ಗೆ ಸಾಮೂಹಿಕ ಗೋಪೂಜೆ ಬಳಿಕ ನಡೆಯುವ ಕ್ರೀಡಾಕೂಟಕ್ಕೆ ಪುತ್ತೂರು ಆದರ್ಶ ವಿವಿದ್ದೋದ್ದೇಶ ಸಹಕಾರಿ ಸಂಘದ ಮಹಾ ಪ್ರಬಂಧಕ ಪ್ರಶಾಂತ್ ಕುಮಾರ್ ರೈ ಬುಡಲೂರು ಚಾಲನೆ ನೀಡಲಿದ್ದಾರೆ. ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ ಅಧ್ಯಕ್ಷತೆ ವಹಿಲಿದ್ದಾರೆ. ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬುಡಲೂರು, ಆಲಂತಾಯ ಶಾಲಾ ಮುಖ್ಯ ಶಿಕ್ಷಕ ವೈ ಸಾಂತಪ್ಪ ಗೌಡ ನೆಲ್ಯೊಟ್ಟು ಅತಿಥಿಗಳಾಗಿರುವರು.

Also Read  ಸರಸ್ವತೀ ವಿದ್ಯಾಲಯ ಮತ್ತು ಶ್ರೀ ಭಾರತಿ ಶಿಶುಮಂದಿರದ ವತಿಯಿಂದ ➤ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಾಯಂಕಾಲ ನಡೆಯುವ ಸಮರೋಪ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ಶೇಖರ ಪಿ ಪ್ರಮುಖ ಭಾಷಣ ಮಾಡಲಿದ್ದಾರೆ. ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷ ಶೀನಪ್ಪ ಪೂಜಾರಿ ಸೀಗೆತ್ತಡಿ ಉಪಸ್ಥಿತರಿವರು ಎಂದು ಗೆಳೆಯರ ಬಳಗ ಅಧ್ಯಕ್ಷ ಚಿದಾನಂದ ಪಾನ್ಯಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top