ಮಂಗಳೂರು: ವಾಲಿಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ತಂಡಗಳ ಮಧ್ಯೆ ಮಾರಾಮಾರಿ

 (ನ್ಯೂಸ್ ಕಡಬ) newskadaba.com ಮಂಗಳೂರು, ಅ.9. ವಾಲಿಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಬಜಾಲ್ ಪರಿಸರದ ಪಕ್ಕಲಡ್ಕ ಎಂಬಲ್ಲಿ ಆದಿತ್ಯವಾರ ಸಂಜೆ ನಡೆದಿದೆ.

ಡಿವೈಎಫ್‍ಐ ವತಿಯಿಂದ ಭಾನುವಾರ ಸೀಮಿತ ತಂಡಗಳ ವಾಲಿಬಾಲ್ ಪಂದ್ಯ ನಡೆಯುತ್ತಿತ್ತು. ಸಂಜೆ ಹೊತ್ತಿಗೆ ಫೈನಲ್ ಪಂದ್ಯ ನಡೆಯುತ್ತಿದ್ದಾಗ ಒಮ್ಮಿಂದೊಮ್ಮೆಲೆ ಹೊಡೆದಾಟ ನಡೆದಿದೆ. ವಾಲಿಬಾಲ್ ನೋಡಲು ಬಂದಿದ್ದ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ವಾಲಿಬಾಲ್ ತಂಡಕ್ಕೂ ಇದಕ್ಕೂ ಸಂಬಂಧವಿಲ್ಲ, ವೈಯಕ್ತಿಕ ದ್ವೇಷದಿಂದ ಈ ಹೊಡೆದಾಟ ನಡೆದಿದೆ ಎಂಬುವುದಾಗಿ ತಿಳಿದುಬಂದಿದೆ.

ಹಿಂದು ಮತ್ತು ಮುಸ್ಲಿಂ ತಂಡಗಳೆರಡು ಬಳಿಕ ಕ್ರಿಕೆಟ್ ಬ್ಯಾಟ್ ಬೀಸುತ್ತಾ ಹೊಡೆದಾಡಿಕೊಂಡಿವೆ. ಎರಡೂ ತಂಡಗಳು ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Also Read  ಶಾಸಕ ಹರೀಶ್ ಪೂಂಜರಿಂದ ವಿನೂತನ ಪ್ರಯೋಗ ➤ SDM ಕ್ಷಯರೋಗ ಆಸ್ಪತ್ರೆ ಈಗ ಕೋವಿಡ್ ಕೇಂದ್ರ

ಘಟನೆಯಲ್ಲಿ ಹಫೀಝ್, ಇಜಾಝ್ ಮತ್ತು ಅಣ್ಣು ಎಂಬುವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಲಿಬಾಲ್ ನೋಡಲು ಬಂದಿದ್ದ ಎರಡು ವಾಹನಗಳ ಗ್ಲಾಸ್ ಒಡೆದು ಪುಡಿ ಮಾಡಲಾಗಿದೆ.

ಘಟನೆ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!
Scroll to Top