ಪುತ್ತೂರು: ಒಂಟಿ ವೃದ್ಧರನ್ನು ಟಾರ್ಗೆಟ್ ಮಾಡಿ ► ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.09. ಒಂಟಿ ವೃದ್ಧರನ್ನು ತನ್ನ ಮಾತಿನ ಮೋಡಿಯಿಂದ ವಂಚಿಸಿ ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿಯೋರ್ವನನ್ನು ಪುತ್ತೂರು ನಗರ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.

ಆರೋಪಿಯನ್ನು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮರಾಠಿಮೂಲೆ ನಿವಾಸಿ ಸುರೇಶ್ ನಾಯ್ಕ(51) ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಸುಮಾರು 1.70 ಲಕ್ಷ ರೂ.ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ‌. ಆರೋಪಿಯು ವೃದ್ಧರನ್ನೇ ಗುರಿಯಾಗಿರಿಸಿ ಅವರೊಂದಿಗೆ ಪರಿಚಯಸ್ಥನಂತೆ ನಟಿಸಿ, ನಂಬಿಕೆ ಹುಟ್ಟಿಸಿ ಬಳಿಕ ಅವರಿಂದ ಬೆಲೆ ಬಾಳುವ ಸೊತ್ತುಗಳನ್ನು ಎಗರಿಸುತ್ತಿದ್ದನೆನ್ನಲಾಗಿದೆ. ಪುತ್ತೂರು ಹಾಗೂ ಉಪ್ಪಿನಂಗಡಿ ಬಸ್ಸು ನಿಲ್ದಾಣಗಳಲ್ಲಿ ಚಿನ್ನದ ಒಡವೆಗಳನ್ನು ದೋಚಿದ 3 ಪ್ರಕರಣಕ್ಕೆ ಸಂಬಂಧಿಸಿ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಅಂತರ್ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ➤ ಜ್ಞಾಜೋದಯ ಬೆಥನಿ ದ್ವಿತೀಯ

ಈ ಕಾರ್ಯಾಚರಣೆಯಲ್ಲಿ ಎಸ್ಪಿಸುಧೀರ್ ಕುಮಾರ್ ಮತ್ತು ಡಿವೈಎಸ್ಪಿಶ್ರೀನಿವಾಸ್ ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರ ಮಾರ್ಗದರ್ಶನದಂತೆ ಕ್ರೈಂ ಎಸ್ಸೈ ವೆಂಕಟೇಶ್ ಭಟ್ ಅವರ ನೇತೃತ್ವದಲ್ಲಿ ಪ್ರೊಬೆಷನರಿ ಎಸ್ಸೈ ರವಿ, ಎಎಸ್ಸೈ ಚಿದಾನಂದ್, ಹೆಡ್ ಕಾನ್‌ಸ್ಟೇಬಲ್‌ಗಳಾದ ಸ್ಕರಿಯ, ಪ್ರಸನ್ನ, ಮಂಜುನಾಥ, ಪ್ರಶಾಂತ್ ರೈ ಪಾಲ್ಗೊಂಡಿದ್ದರು.

error: Content is protected !!
Scroll to Top