ಕಾಂಗ್ರೆಸ್ ಮತ್ತು  ಬಿಜೆಪಿ ಪಕ್ಷಕ್ಕೆ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಸಮಯವಿಲ್ಲ ► ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ

(ನ್ಯೂಸ್ ಕಡಬ) newskadaba.com ಕಡಬ,ಅ.9. ಜೆಡಿಎಸ್ ಪಕ್ಷದ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯು ಒಕ್ಕಲಿಗ ಗೌಡ ಸಭಾ ಭವನದಲ್ಲಿ ಆದಿತ್ಯವಾರ ನಡೆಯಿತು.

ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಹಮ್ಮದ್ ಕುಂಞ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಬಿಜೆಪಿ ಪಕ್ಷದ ಆಡಳಿತದಿಂದ ಜನರು ನಿರಸನಗೊಂಡಿದ್ದು ಕೇವಲ ಅಧಿಕಾರಕ್ಕಾಗಿ 2ಪಕ್ಷಗಳು ರಾಜಕೀಯ ಮೇಲಾಟ ನಡೆಸುವುದನ್ನು ಬಿಟ್ಟಾರೆ ರೈತರ, ಜನಸಾಮಾನ್ಯರ, ಸಂಕಷ್ಟಗಳಿಗೆ ಸ್ಪಂದಿಸಲು ಅವರಿಗೆ ಸಮಯವಿಲ್ಲ ಜಿಲ್ಲೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷರು ಸೇರಿದಂತೆ ಹಲವಾರು ಜನರ ಕಗ್ಗೊಲೆ ನಡೆದರು ಉಸ್ತುವಾರಿ ಮಂತ್ರಿಗಳಿಂದ ಹಾಗೂ ಸಚಿವರಿಂದ ಜಿಲ್ಲೆಯ ಶಾಂತಿ ಕಾಪಾಡಲು ಸಾಧ್ಯವಾಗುತ್ತಿಲ್ಲ ಇಂತಹ ತಾಕತ್ತಿಲ್ಲದ ಸಚಿವರನ್ನು ಅವರವರ ಊರಲ್ಲಿಂದಲೇ ಜನರು ಓಡಿಸಲು ಮುಂದಾಗಿರುವುದು ಕಾಂಗ್ರೇಸ್ ಸರಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಎಂದ ಅವರು ಜಿಲ್ಲಾಧಿಕಾರಿಯಿಂದ ಹಿಡಿದು ತಹಶೀಲ್ದಾರರವರೆಗಿನ ಒಬ್ಬನೇ ಅಧಿಕಾರಿ ರಾಜ್ಯ ಸರ್ಕಾರವನ್ನು ಆಳುತ್ತಿರುವ ಕಾಂಗ್ರೆಸ್ ಮಂತ್ರಿಗಳ ಮಾತು ಕೇಳುತ್ತಿಲ್ಲ. ಕೇಂದ್ರದಲ್ಲಿ ಮೋದಿಯವರು ರೈತರ ಕೃಷಿಗೆ ಬೆಲೆ ಇಲ್ಲದಂತೆ ಮಾಡಿ ಜಿಎಸ್ಟಿ ಜಾರಿಗೆ ತಂದು ಜನರ ಅನ್ನಕ್ಕೆ ಕಲ್ಲುಹಾಕಿದ್ದಾರೆ. ಗುಜರಾತ್ನಲ್ಲಿ ಮೋದಿಯವರ ಪ್ರತಿಮೆಯನ್ನು ಮಾಡಿ ಚಪ್ಪಲಿಯಿಂದ ಹೊಡೆದು ಸುಟ್ಟುಹಾಕಿದ್ದಾರೆ. ದೇಶಾದ್ಯಾಂತ ಮೋದಿ ಸರ್ಕಾರ ಕೊನೆಗಾನಬೇಕೆಂದು ಜನ ಬಯಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಯಾರಿಗೂ ಬೇಡವಾಗಿದೆ. ಕರವಾಳಿ ಭಾಗದಲ್ಲಿ ಕೋಮು ದ್ವೇಷ ಜನರಲ್ಲಿ ಬಿತ್ತಿ ಜಾತಿ ರಾಜಕೀಯ ಮಾಡಿ ಲಾಭಗಳಿಸಲು ಯತ್ನಿಸುತ್ತಿರುವ ಬಿಜೆಪಿಯನ್ನು ಜನ ತಿರಸ್ಕಾರಿಸುತ್ತಾರೆ. ಕಾಂಗ್ರೆಸ್ ಇಬ್ಬಾಗ ನೀತಿ ಮತ್ತು ಕುಠಿಲ ನೀತಿ ರಾಜಕೀಯದಿಂದ ಈ ಬಾರಿ ರಾಜ್ಯಾದಂತ ಸಿದ್ದರಾಮಯ್ಯ ಸರಕಾರವನ್ನು ಕೊನೆಗಾಣಿಸಲಿದ್ದಾರೆ. ಈ ಎರಡು ಪಕ್ಷಗಳ ಮತದಾರರು ದಿಕ್ಕರಿಸಿ ಜಾತ್ಯತೀತ ನಿಲುವಿನ ಕುಮಾರಸ್ವಾಮಿ ಸರಕಾರವನ್ನು ತರಲಿದ್ದಾರೆ.

ರೈತರ ಸಾಲಮನ್ನಾ ಮಾಡುವ ಜೆಡಿಎಸ್ ಸರ್ಕಾರ ಬರಬೇಕು: ಜಾಕಿ ಮಾಧವ ಗೌಡ:-
ಸುಳ್ಯ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಅಧ್ಯಕ್ಷ ಜಾಕಿ ಮಾಧವ ಗೌಡ ಮಾತನಾಡಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಲ್ಲದೆ ರೈತರು ಬೆಳೆಸಿದ ಬೆಲೆಗೆ ನ್ಯಾಯಯುತ ಬೆಲೆ ಸಿಗಬೇಕಾದರೆ ಜಾತ್ಯತೀತ ಪಕ್ಷವಾದ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬರಬೇಕಾಗಿದೆ. ಕೇಂದ್ರ ಸರ್ಕಾರದ ಬೆಲೆ ಕುಸಿತ ಧೋರಣೆಯಿಂದ ಕಂಗೆಟ್ಟಿರುವ ರೈತರು ವಿವಿಧ ಭ್ಯಾಂಕ್ಗಳಿಂದ ಸಾಲ ಪಡೆದು ಹಿಂತಿರುಗಿಸಲು ಸಾಧ್ಯವಾಗದೆ ಸಂಪೂರ್ಣ ಸಾಲಗಾರರಾಗಿ ರೈತರು ಬೆಳೆದ ಬೆಲೆಗಳಿಗೆ ನ್ಯಾಯಯುತ ಬೆಲೆ ಸಿಗದೆ ಸಂಕಷ್ಟದಲ್ಲಿದ್ದು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದಾದಂತ್ಯ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಬಿಜೆಪಿಯನ್ನು ಸಾರಾಗವಾಗಿ ದೂರುತ್ತಿರುವ ಮತದಾರರು ಜೆಡಿಎಸ್ ಪಕ್ಷವನ್ನು ಎಲ್ಲೂ ದೂರುತ್ತಿಲ್ಲ. ಮುಂದಿನ ದಿನಗಳಲ್ಲಿ ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡುದರೊಂದಿಗೆ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುವುದರ ಮೂಲಕ ಪ್ರತಿಯೊಬ್ಬ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿಯವರಲ್ಲಿ ಮಾತನಾಡಲು ಮುಕ್ತ ಸ್ವಾತಂತ್ರ್ಯ ನೀಡಲಿದ್ದು ಕುಮಾರಸ್ವಾಮಿಯವರ ಸಂವಾದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಅವಕಾಶ ನೀಡುವುದರೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ನಡೆಸಲಿದ್ದು ಹತ್ತು ಸಾವಿರಕ್ಕೂ ಹೆಚ್ಚಿನ ರೈತರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ಸಾರಿ ಸಾರಿ ಕಚ್ಚುವ ಹಾವಗಿದ್ದಾರೆ ಕಾಂಗ್ರೆಸ್ ಹುಲ್ಲಿನ ಮಧ್ಯೆ ಇರುವ ಹಾವಿನಂತೆ: ಐ.ಕೆ.ಕೈಲಾಸ್.
ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಐ.ಕೆ.ಕೈಲಾಸ್ ಮಾತನಾಡಿ ಬಿಜೆಪಿಯವರು ಜಾತಿ ಜಾತಿಯೊಳಗೆ ಸಂಘರ್ಷವನ್ನುಂಟ್ಟು ಮಾಡಿ ಜಗಳವನ್ನಾಡಿಸುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೋಳ್ಳಲು ಮುಂದಾಗುತ್ತಿದ್ದಾರೆ ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷ ಎನ್ನುತ್ತಾ ಮುಸ್ಲಿಮರನ್ನು ತಮ್ಮ ಓಟುಬ್ಯಾಂಕ್ ಮಾಡಿಕೊಂಡು ದ್ವಿಮುಖ ನೀತಿ ಅನುಸರಿಸುತ್ತ ಮುಗ್ಧ ಜನರನ್ನು ಬಲಿಪಶು ಮಾಡುತ್ತಿದೆ. ಎಂದು ದೂರಿದ ಅವರು ಎರಡು ಪಕ್ಷಗಳಿಂದ ಜನರ ಬದುಕಿಗೆ ಕಂಟಕವಾಗುತಿದ್ದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಲಿದ್ದು ಬಿಜೆಪಿಗೆ 60-70 ಸ್ಥಾನ ಗಳಿಸಲು ಕಷ್ಟಸಾಧ್ಯವಾಗುದರೊಂದಿಗೆ ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಸೋಲಾಗಲಿದೆ ಎಂದ ಅವರು ರೈತಾಪಿ ವರ್ಗದ ಜನನಾಯಕ ಕುಮಾರಸ್ವಾಮಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಕಡಬ ಜೆಡಿಎಸ್ ಉಪಾಧ್ಯಕ್ಷರಾಧ ಚಂದ್ರಶೇಖರ ಗೌಡ ಕೋಡಿಬೈಲು, ಕುಂಞಣ್ಣ ಗೌಡ ಮಣಿಭಾಂಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉತ್ತಮನ್ ಪಿಳ್ಳೆ, ಪಕ್ಷದ ಸಂಘಟನೆ ಬಗ್ಗೆ ಮಾತಾನಾಡಿದರು.

ಕಡಬ ತಾಲೂಕು ಜ್ಯಾತತೀತ ಜನತಾದಳ ಅಧ್ಯಕ್ಷ ಹಾಜಿ ಸೈಯದ್ ಮೀರಾ ಸಾಹೇಬ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕಸ್ತೂರಿರಂಗನ್ ವರದಿಯಿಂದ ಈ ಭಾಗದ ಹಲವಾರು ರೈತಾಪಿ ವರ್ಗದವರು ತಮ್ಮ ಕೃಷಿಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೇಂದ್ರ ಸರ್ಕಾರದ ಇಬ್ಬಗೆ ನೀತಿಯಿಂದ ರೈತರ ರಬ್ಬರ್, ಅಡಿಕೆ, ಕಾಳುಮೆಣಸು, ಸೇರಿದಂತೆ ಕೃಷಿಗೆ ಬೆಲೆ ಕುಸಿತ ಕುಮ್ಕಿ ಹಕ್ಕು ಕಾಯಿದೆ ಬಗ್ಗೆ ಜೆಡಿಎಸ್ ನಾಯಕರ ಸಹಕಾರದೊಂದಿಗೆ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಕಡಬ ತಾಲೂಕು ಉಪಾಧ್ಯಕ್ಷರಾದ ಸುಂದರ ಗೌಡ ಬಳ್ಳೇರಿ, ರೈತ ಮುಖಂಡ ವಿಲ್ಪ್ರೇಡ್ ಲಾರೆನ್ಸ್‌ ಮಾರ್ಟಿನ್, ಶಶಿಧರ ಎಡಮಂಗಲ, ಹರಿಯಪ್ಪ ಗೌಡ, ಜಿಲ್ಲಾ ಸಮಿತಿ ಸದಸ್ಯ ಥೋಮಸ್ಸ್‌ ಕೆ.ಟಿ., ಕಡಬ ತಾಲೂಕು ಮಹಿಳಾ ಜೆಡಿಎಸ್ ಅಧ್ಯಕ್ಷೆ ಲೂಸಿ ಮಾರ್ಟಿನ್, ಉಪಾಧ್ಯಕ್ಷೆ ಲತಾಸುರೇಶ್ ನೆಟ್ಟಣ, ಕಡಬ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಹರಿಪ್ರಸಾದ್ ಎನ್ಕಾಜೆ, ಪುತ್ತೂರು ತಾಲೂಕು ಅಲ್ಪಸಂಖ್ಯಾತ ವಿಭಾಗ್ ಅಧ್ಯಕ್ಷ ಕರೀಂ ಪಲ್ಲತ್ತಡ್ಕ ಉಪಸ್ಥಿತರಿದ್ದರು. ಉದಯಶಂಕರ್ ರೈ, ರಮೇಶ್ ನೈಲ, ಮುತ್ತಪ್ಪ ಅಡ್ಡಹೊಳೆ, ಪದ್ಮನಾಭ ಪನ್ಯಾಡಿ, ಸುರೇಶ್ ನೆಟ್ಟಣ, ಪಕ್ಷ ಸಂಘಟನೆ ಬಗ್ಗೆ ಸಲಹೆ ಸೂಚನೆ ನೀಡಿದರು. ಕಡಬ ತಾಲೂಕು ಯುವ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಸನು ಕಲ್ಲುಗುಡ್ಡೆ ವಂದಿಸಿದರು.

error: Content is protected !!

Join the Group

Join WhatsApp Group