ಖಾಸಗಿ ಶಾಲೆಗಳ ದುಬಾರಿ ಶುಲ್ಕ ಖಂಡಿಸಿ ► ತನ್ವೀರ್ ಸೇಠ್ ನಿವಾಸದ ಮೇಲೆ ಕರವೇ ಯುವ ಸೇನೆಯಿಂದ ಮುತ್ತಿಗೆ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ.7. ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಖಂಡಿಸಿ ಕರವೇ ಯುವ ಸೇನೆ ವತಿಯಿಂದ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ನಿವಾಸದ ಬಳಿ  ಶನಿವಾರ ಪ್ರತಿಭಟನಾ ಧರಣಿ ನಡೆಸಿದರು.

 ಈ ವೇಳೆ ಸಚಿವ ತನ್ವೀರ್ ಸೇಠ್ ನಿವಾಸದ ಮೇಲೆ ಮುತ್ತಿಗೆ ಹಾಕಿದ ಕರವೇ ಯುವ ಸೇನೆ ಕಾರ್ಯಕರ್ತರು ಅವರ ಮನೆಯಲ್ಲಿರುವ ಪಾಟ್ ಮತ್ತು ಕಿಟಕಿ ಗಾಜುಗಳನ್ನ ಒಡೆದಿದ್ದಾರೆ.

ಪ್ರತಿಭಟನೆ ನಡೆಯುತ್ತಿದ್ದಂತೆಯೇ ಮನೆಯಿಂದ ಹೊರಬಂದ ಸಚಿವರು ಪ್ರತಿಭಟನಾಕಾರರ ಜೊತೆ ಮಾತನಾಡಿ, ಏಕಾಏಕಿ ಮನಗೆ ನುಗ್ಗೋದು ಪ್ರವೃತ್ತಿ ಅಲ್ಲ. ಬಂದಂತಹ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವುದು ನನ್ನ ಕರ್ತವ್ಯ. ಲಿಖಿತವಾಗಿ ಸಮಸ್ಯೆಗಳನ್ನು ನನಗೆ ತಿಳಿಸಿ ನಾನು ನಿಮ್ಮ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡ್ತೆನೆ ಅಂತ ಭರವಸೆ ನೀಡಿದ್ರು.

Also Read  ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ➤ ಸಿಎಂ ಘೋಷಣೆ

ಇಲ್ಲಿಯವರೆಗೆ ಈ ಬಗ್ಗೆ ನನಗೆ ಯಾವುದೇ ದೂರುಗಳು ಬಂದಿಲ್ಲ. ಖಾಸಗಿ ಶಾಲೆಗಳ ದುಬಾರಿ ಶುಲ್ಕದ ವಿರುದ್ಧ ಕ್ರಮ ತೆಗೆದುಕೊಳ್ಳೋ ಭರವಸೆ ನೀಡಿದ್ದೀನಿ. ಇಲಾಖೆಯ ವರದಿಗಳನ್ನು ತರಿಸಿಕೊಂಡು ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಮತ್ತು ಡಿಸಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು. ರಾಜ್ಯದ ಜೀವ ಭಾಷೆ, ನೆಲದ ಬಗ್ಗೆ ನಾವು ಬದ್ಧರಾಗಿದ್ದೇವೆ ಅಂತ ಹೇಳಿದ್ರು.

error: Content is protected !!
Scroll to Top