ಉಡುಪಿ: ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರ ➤ ವಾರೀಸುದಾರರು ಸಂಪರ್ಕಿಸುವಂತೆ ಸಮಾಜಸೇವಕರ ಸೂಚನೆ

(ನ್ಯೂಸ್ ಕಡಬ) newskadaba.com ಉಡುಪಿ ನ. 30: ನಗರದ ಕಿದಿಯೂರು ಹೋಟೆಲ್ ಬಳಿಯ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

 

ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಸರು ವಿಳಾಸ ತಿಳಿದು ಬಂದಿಲ್ಲ. ವಾರೀಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ನಿತ್ಯಾನಂದ ಒಳಕಾಡು ಮನವಿ ಮಾಡಿದ್ದಾರೆ.ಕಾರ್ಯಾಚರಣೆಗೆ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಹಿಳಾ ಸೆಕ್ಯೂರಿಟಿ ಗಾರ್ಡ್ ಶ್ರುತಿ ಸಹಕರಿಸಿದರು.

Also Read  ತ್ಯಾಜ್ಯ ವಾಹನದಲ್ಲಿ ಜೀವಂತ ನಾಯಿ ಸಾಗಾಟ - ಚಾಲಕನಿಗೆ ಎಚ್ಚರಿಕೆ ನೀಡಿದ ಪಾಲಿಕೆ

 

error: Content is protected !!
Scroll to Top