ಉಡುಪಿ : ದೊಂದಿ ಬೆಳಕಿನ ತೆಪ್ಪೋತ್ಸವ ಸಂಪನ್ನ

(ನ್ಯೂಸ್ ಕಡಬ) newskadaba.com ಉಡುಪಿ, . 30: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೃಷ್ಣಮಠದ ಲಕ್ಷ ದೀಪೋತ್ಸವ ಕೊನೆಯ ದಿನ ದೊಂದಿ ಬೆಳಕಿನ ತೆಪ್ಪೋತ್ಸವ ನಡೆಯುವುದರೊಂದಿಗೆ ಸಂಪನ್ನಗೊಂಡಿತು.

ಲಕ್ಷದೀಪೋತ್ಸವ ,ತೆಪ್ಪೋತ್ಸವದೊಂದಿಗೆ ಉತ್ಸವಪ್ರಿಯ ಕೃಷ್ಣನಿಗೆ ನಿತ್ಯ ಉತ್ಸವಗಳು ನಡೆಯುವುದು ಸಂಪ್ರದಾಯ. ಮಳೆಗಾಲದ 4 ತಿಂಗಳು ಕೃಷ್ಣನಿಗೆ ಯಾವುದೇ ಉತ್ಸವಗಳು ನಡೆಯುವುದಿಲ್ಲ. ಇದೇ ಸಂದರ್ಭದಲ್ಲಿ ಶ್ರೀಗಳ ಚಾತುರ್ಮಾಸ್ಯ ವ್ರತವೂ ನಡೆಯುತ್ತದೆ. ಉತ್ಥಾನ ದ್ವಾದಶಿಯ ನಂತರ ದೇವರನ್ನು ಹೊರಗೆ ತಂದು ಮತ್ತೆ ನಿತ್ಯವೂ ಉತ್ಸವಗಳನ್ನು ನಡೆಸಲಾಗುತ್ತದೆ. ರಥಬೀದಿಯಲ್ಲಿ ಲಕ್ಷದೀಪೋತ್ಸವ ಮತ್ತು ಮಧ್ವಸರೋವರದಲ್ಲಿ ದೊಂದಿ ಬೆಳಕಿನ ತೆಪ್ಪೋತ್ಸವ ವೈಭವದಿಂದ ಸಂಪನ್ನಗೊಂಡಿತು.

Also Read  ಕಾವಳಕಟ್ಟೆ ಐಟಿಐಗೆ ಪ್ರವೇಶ ಪ್ರಕ್ರಿಯೆ ಆರಂಭ

 

error: Content is protected !!
Scroll to Top