(ನ್ಯೂಸ್ ಕಡಬ) newskadaba.com ಮಂಗಳೂರು ನ. 30: ಆಳ್ವಾಸ್ ಪದವಿ ಕಾಲೇಜಿನ ಬಿ.ಎಸ್.ಡಬ್ಲೂ ಹಾಗೂ ಫುಡ್ ಆಯಂಡ್ ನ್ಯೂಟ್ರೀಷನ್ ವಿಭಾಗದ ವತಿಯಿಂದ ”ಅನ್ವೇಷಣಾ” ರಿಸರ್ಚ ಫೋರಂ ಉದ್ಘಾಟನಾ ಕಾರ್ಯಕ್ರಮವು ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಜರುಗಿತು.
ಆಳ್ವಾಸ್ ಕಾಲೇಜಿನ ಸಂಶೋಧನಾ ವಿಭಾಗದ ಸಂಯೋಜಕ ಡಾ. ಸುಕೇಶ್, ಸಂಶೋಧನೆಯ ಹಲವು ಆಯಾಮಗಳ ಬಗ್ಗೆ ಮಾಹಿತಿ ನೀಡಿದರು. ಸಂಶೋಧನೆಯ ಕೌಶಲ್ಯ ತರಗತಿಯಲ್ಲಿ ಪಾಠ ಕೇಳುವುದರಿಂದ ಬರುವುದಲ್ಲ, ಪರಸ್ಪರ ಚರ್ಚಿಸಿ ಪ್ರಶ್ನೆಗಳು ಹುಟ್ಟಿಕೊಂಡಾಗ, ಉತ್ತರವನ್ನು ಸಂಶೋಧನೆಯ ಮೂಲಕ ಕಂಡುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ವಿದ್ಯಾರ್ಥಿಗಳು ಪರಸ್ಪರ ಚರ್ಚೆ ನಡೆಸುವುದರಿಂದ ಯಾವುದೇ ವಿಷಯದ ಆಳ-ಅಗಲ ತಿಳಿಯಲು ಸಾಧ್ಯ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು. ಪದವಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ. ಹಾಗೂ ಫುಡ್ ಆಂಡ್ ನ್ಯೂಟ್ರೀಷನ್ ವಿಭಾಗದ ಮುಖ್ಯಸ್ಥೆ ಆಶಿತಾ, ಸಮಾಜಕಾರ್ಯ ವಿಭಾಗದ ಡಾ ಸಪ್ನಾ ಉಪಸ್ಥಿತರಿದ್ದರು. ಉಪನ್ಯಾಸಕಿ ಮಧುರಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.