ಕಡಬ: ಶ್ರೀಲಂಕಾ ಹಾಗೂ ತಮಿಳು ನಿರಾಶ್ರಿತರಿಗೆ ನಿವೇಶನ ಕಾದಿರಿಸಲು ಮನವಿ ► ಸೂಕ್ತ ಕ್ರಮದ ಭರವಸೆ ನೀಡಿದ ಶಾಸಕ ಎಸ್. ಅಂಗಾರ

(ನ್ಯೂಸ್ ಕಡಬ) newskadaba.com ಕಡಬ,ಅ.7. ಐತ್ತೂರು ಗ್ರಾ.ಪಂ. ವ್ಯಾಪ್ತಿಯ ತಮಿಳು ನಿರಾಶ್ರಿತರಿಗೆ ಕಾದಿರಿಸದ ಜಾಗವನ್ನು ಫಲಾನುಭವಿಗಳಿಗೆ ನೀಡುವಂತೆ ಹಾಗೂ ಉಳಿದ ನಿರಾಶ್ರಿತರಿಗೆ ನಿವೇಶನ ಕಾದಿರಿಸುವಂತೆ ಮತ್ತು ಬಿಪಿಎಲ್ ಪಡಿತರ ಚೀಟಿ ಹಾಗೂ ಜಾತಿ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಬ ತಮಿಳು ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಸುಳ್ಯ ಶಾಸಕರಿಗೆ ಹಾಗೂ ತಹಶೀಲ್ದಾರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್.ಕೆ., ಐತ್ತೂರು ಗ್ರಾಮದ ಕೋಕಳ ಎಂಬಲ್ಲಿ ಶ್ರೀಲಂಕಾ ನಿರಾಶ್ರೀತರಿಗೆ 3.69ಎಕ್ರೆ ಜಾಗವನ್ನು ಎಲ್ಎನ್ಡಿ/ಸಿಆರ್/130/1998-99ರಲ್ಲಿ ಕಾದಿರಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿದರೂ ತಹಶೀಲ್ದಾರರ ಕಚೇರಿಯಿಂದ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಇದುವರೆಗೆ ಐತ್ತೂರು ಗ್ರಾ.ಪಂಚಾತ್ನಲ್ಲಿ ನಿವೇಶನಕ್ಕಾಗಿ ಸುಮಾರು 524ಅರ್ಜಿಗಳು ಬಂದಿವೆ ಈ ನಿವೇಶನದಲ್ಲಿ 0.03ಸೆಂಟ್ಸ್‌ನಂತೆ ಕೇವಲ 75 ಫಲಾನುಭವಿಗಳಿಗೆ ಮಾತ್ರ ನಿವೇಶನ ನೀಡಲು ಸಾಧ್ಯ ಉಳಿದ ಫಲಾನುಭವಿಗಳಿಗೆ ಐತ್ತೂರು ಗ್ರಾಮದ ಓಟಕಜೆ ಎಂಬಲ್ಲಿ ಸರ್ವೆ ನಂಬ್ರ 128/1ಪಿ1, 129/1ಎ, 128/4ಪಿ1, ಸರಕಾರಿ ಜಾಗವಿದ್ದು, ಈ ಜಾಗವನ್ನು ಶ್ರೀಲಂಕಾ ನಿರಾಶ್ರಿತರಿಗೆ ಕಾದಿರಿಸುವಂತೆ ಕಳೆದ ಮೇ ತಿಂಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಇದಕ್ಕೂ ಯಾವುದೇ ಸ್ಪಂದನೆ ದೊರಕಿರುವುದಿಲ್ಲ. ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಧೀಶರ ಅಧ್ಯಕ್ಷತೆಯಲ್ಲಿ ಐತ್ತೂರು ಗ್ರಾ.ಪಂ. ಸಭಾಭವನದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಕಾರಣಾಂತರಗಳಿಂದ ತಪ್ಪಿಹೋಗಿ ಪರಿಹಾರ ಸಿಗುವ ವ್ಯವಸ್ಥೆಯೇ ತಪ್ಪಿಹೋಗಿದೆ. ಅಲ್ಲದೆ ದಿನಗೂಲಿ ನೌಕರರಾಗಿರುವ ಶ್ರೀಲಂಕಾ ನಿರಾಶ್ರಿತ ಕುಟುಂಬಗಳಿಗೆ ಶೇ75 ಮಾತ್ರ ಬಿಪಿಎಲ್ ಪಡಿತರ ಚೀಟಿ ನೀಡಲಾಗಿದೆ ಉಳಿದ ಶೇ.25ರಷ್ಟು ಕುಟುಂಬಗಳಿಗೆ ಪಡಿತರ ಚೀಟಿ ನೀಡಲು ಬಾಕಿ ಇದೆ. ಈಗ ಡಿಸೆಂಬರ್ ತನಕ ಕೆ.ಎಫ್, ಡಿ.ಸಿ.ಪ್ಯಾಕೇಜ್ನಿಂದ ದಿನಕೂಲಿ ನೌಕರರಿಗೆ ಬಿಪಿಎಲ್ ಪಡಿತರ ನೀಡಲು ಆದಾಯ ಮಿತಿ ಹೆಚ್ಚಾಗಿದೆ ಎಂದು ವಂಚಿಸುತ್ತಿದ್ದಾರೆ. ಹಾಗೂ ತಮಿಳು ಕುಟುಂಬಗಳಿಗೆ ಯಾವುದೇ ಸರಕಾರಿ ಸೌಲಭ್ಯ ಪಡೆದುಕೊಳ್ಳಲು ಜಾತಿ ಪ್ರಮಾಣ ಅಗತ್ಯವಿದ್ದು ಸರಕಾರ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಜಾತಿಯವರಿಗೆ ಮಾತ್ರ ನೀಡಲಾಗಿದೆ. ಉಳಿದ ಜಾತಿಯವರಿಗೆ ಯಾವುದೇ ಜಾತಿ ಪ್ರಮಾಣಪತ್ರ ನೀಡಿಲ್ಲ. ಇದರಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸ ಹಾಗೂ ಸರಕಾರಿ ಸೌಲಭ್ಯ ಪಡೆದುಕೊಳ್ಳಲು ಕಷ್ಟಕರವಾಗಿದೆ ಒಟ್ಟಿನಲ್ಲಿ ಕರ್ನಾಟಕ ಸರಕಾರದ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ದಿನಗೂಲಿ ಕಾರ್ಮಿಕರು ತನ್ನ ಸೇವಾ ಅವಧಿ ಮುಗಿದ ಬಳಿಕ ಬೀದಿಪಾಲಾಗುವ ಪರಿಸ್ಥಿತಿಯಿದೆ ಇದಕ್ಕೆ ತಕ್ಷಣ ಸೂಕ್ತ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Also Read  ಮಕ್ಕಳಿಗೆ ತಿನಸುಗಳನ್ನು ನೀಡುವಾಗ ಎಚ್ಚರ...!!! ►ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಮಗು ಮೃತ್ಯು..!!!  

ಈ ಸಂದರ್ಭದಲ್ಲಿ ಕಡಬ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ತಮಿಳು ಪುನರ್ವಸತಿದಾರರ ಹೋರಾಟ ಸಮಿತಿ ಅಧ್ಯಕ್ಷ ಮುನಿರತ್ನ ಬಜಕೆರೆ, ಸಂಚಾಲಕರಾದ ಶಿವರಾಸನ್ ತುಂಬ್ಯ, ಕಾರ್ಯದರ್ಶಿ ಶಿವರಾಜ್ ಬೆತ್ತೋಡಿ, ಗ್ರಾ.ಪಂ.ಸದಸ್ಯೆ ಗೋಮತಿ, ಐತ್ತೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸಿ.ಪಿ. ಜಾನ್ ಬೆತ್ತೋಡಿ, ತಮಿಳು ಬಿಜೆಪಿ ಘಟಕದ ಅಧ್ಯಕ್ಷ ತಿರುಪತಿ ಎನ್ಕೂಪ್, ಪ್ರಮುಖರಾದ ರಾಜರತ್ನ 72ಕಾಲೋನಿ, ಮಹೇಂದ್ರ ಓಟಕಜೆ, ಶಿವಲಿಂಗ ಬಜಕೆರೆ, ಸುರೇಶ ಕಲ್ಲಾಜೆ, ಪಿ.ಆರ್.ಕುಮಾರ್. ವಿನಯ ಓಟಕಜೆ, ಶಿವ ಮಂಡೆಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Also Read  ಕಡಬ ತಾ| ಸಾಹಿತ್ಯ ಸಮ್ಮೇಳನಕ್ಕೆ ಸಮ್ಯಕ್ತ್ ಜೈನ್ ಆಯ್ಕೆ

ಕಡಬ ತಹಶೀಲ್ದಾರ ಕಚೇರಿಯಲ್ಲಿ ಮನವಿ ಸ್ವೀಕರಿಸಿದ ಶಾಸಕ ಎಸ್. ಅಂಗಾರರವರು ಕೋಕಳ ನಿವೇಶನದ ಮೇಲಿನ ಆಕ್ಷೇಪಣೆಯನ್ನು ತೆರವುಗೊಳಿಸಿ ಫಲಾನುಭಾವಿಗಳಿಗೆ ನಿವೇಶನ ಹಂಚಿಕೆ ಮಾಡಲು ಹಾಗೂ  ಓಟಕಜೆಯಲ್ಲಿನ ತಮಿಳು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಜಾನ್ ಪ್ರಕಾಶ್ರವರಿಗೆ ಸೂಚಿಸಸಿದರಲ್ಲದೆ ಅರ್ಹ ಫಲಾನುಭಾವಿಗಳಿಗೆ ಪಡಿತರ ಚೀಟಿ ನೀಡಲು ವ್ಯವಸ್ಥೆ ತಕ್ಷಣ ಕಲ್ಪಿಸಲು ಆಗ್ರಹಿಸಿದರು ಇದಕ್ಕೆ ತಹಶೀಲ್ದಾರು ಜಾನ್ ಪ್ರಕಾಶ್ ಒಂದು ವಾರದೊಳಗೆ ವ್ಯವಸ್ಥೆ ಕಲ್ಪಿಸುವುದಾಗಿ ಸೂಚಿಸಿದರು.

error: Content is protected !!
Scroll to Top