ಮುರ್ಡೇಶ್ವರ: ಸಮುದ್ರದಲ್ಲಿ ಮುಳುಗಿ ಬೆಂಗಳೂರಿನ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಭಟ್ಕಳ ನ. 30: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರ ಸಮುದ್ರದಲ್ಲಿ ಬೆಂಗಳೂರಿನ ಬಾಣಸಂದ್ರ ನಿವಾಸಿ ಮಂಜುನಾಥ್ ವೆಂಕಟೇಶ್ ಮಡಿವಾಳ (20) ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

 

ಮೃತ ಮಂಜುನಾಥ್ ವೆಂಕಟೇಶ್ ತನ್ನ ಏಳು ಜನ ಸ್ನೇಹಿತರೊಂದಿಗೆ ಈಜುತ್ತಿರುವಾಗ ಈ ದುರ್ಘಟನೆ ನಡೆದಿದೆ. ಈಜಲು ಸಮುದ್ರಕ್ಕೆ ಇಳಿದಿದ್ದ ಈ ಏಳು ಜನರ ಪೈಕಿ ಮಂಜುನಾಥ್ ಅವರನ್ನು ಹೊರತು ಪಡಿಸಿ ಉಳಿದವರು ನೀರಿನಿಂದ ಮೇಲೆ ಬಂದಿದ್ದರು. ಆದರೆ ಮಂಜುನಾಥ್ ಅಲೆಗಳ ರಭಸಕ್ಕೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದಾಗ ದಡದಲ್ಲಿದ್ದ ಮೀನುಗಾರರು ಗಮನಿಸಿ ಅವರ ರಕ್ಷಣೆ ಮಾಡಿ ಸಮುದ್ರದಿಂದ ಮೇಲೆ ತಂದಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತ ಪಟ್ಟಿದ್ದಾರೆ.

Also Read  ಕೋವಿಡ್ ತಪಾಸಣೆ ಮಾಡದವರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಡಳಿತ ➤ ಎಲ್ಲಾ ಸಾರ್ವಜನಿಕರಿಗೆ ಆಯಾ ಗ್ರಾ.ಪಂ.ನಲ್ಲಿ ಕೊರೋನಾ ಟೆಸ್ಟ್ ಕಡ್ಡಾಯ

 

error: Content is protected !!
Scroll to Top