ನ.30 ರ ನಾಳೆ ವರ್ಷದ 4ನೇ ಮತ್ತು ಕೊನೆಯ ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ನವದೆಹಲಿ . 29: ವರ್ಷದ ನಾಲ್ಕನೇ ಮತ್ತು ಕೊನೆಯ ಚಂದ್ರಗ್ರಹಣ ನ.30 ರ ನಾಳೆ ಸಂಭವಿಸಲಿದೆಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ ಮತ್ತು ನೈಸರ್ಗಿಕ ಉಪಗ್ರಹವು ಭೂಮಿಯ ಹೊರಛಾಯೆಯ ಮೂಲಕ ಹಾದು ಹೋಗಲಿದೆ. ಆಸ್ಟ್ರೇಲಿಯಾ, ಏಷ್ಯಾ, ಪೆಸಿಫಿಕ್, ಯುರೋಪ್, ಅಟ್ಲಾಂಟಿಕ್, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೇರಿಕಾದಲ್ಲಿ ಚಂದ್ರಗ್ರಹಣ ಗೋಚರಿಸಲಿದೆಯಾದರೂ ಇದು ಹವಾಮಾನದ ಮೇಲೆ ಪ್ರಮುಖವಾಗಿ ಅವಲಂಭಿತವಾಗಿರುತ್ತದೆ, ಮಂಜು ಮತ್ತು ಮೋಡಕವಿದ ವಾತಾವರಣ ಗ್ರಹಣ ಗೋಚರತೆಗೆ ಅಡ್ಡಿಯಾಗಬಹುದು ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಚಂದ್ರಗ್ರಹಣವನ್ನು ಛಾಯಾ ಚಂದ್ರಗ್ರಹಣ, ಪೆನಂಬ್ರಲ್‌ ಚಂದ್ರಗ್ರಹಣ ಹಾಗೂ ರಾಹು. ಗ್ರಸ್ತ ಚಂದ್ರಗ್ರಹಣ ಎಂದು ಕರೆಯುತ್ತಾರೆ. ನಾಳೆ ಮಧ್ಯಾಹ್ನ 1.02ಕ್ಕೆ ಗ್ರಹಣ ಆರಂಭವಾಗಲಿದ್ದು, ಸಂಜೆ 5.20 ಗ್ರಹಣ ಅಂತ್ಯ.ವಾಗಲಿದೆ. ಮಧ್ಯಾಹ್ನ 3.12ನಿಮಿಷಕ್ಕೆ ಗ್ರಹಣ ಉತ್ತುಂಗ ಸ್ಥಿತಿಯಲ್ಲಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

error: Content is protected !!

Join the Group

Join WhatsApp Group