ಎಡಮಂಗಲ: ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಎಡಮಂಗಲ . 29: ವ್ಯಕ್ತಿಯೊಬ್ಬರು ಸೌದೆ ತರಲು ಕಾಡಿಗೆ ಹೋದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಕೊನೆಯುಸಿರೆಳೆದ ಘಟನೆ ಎಡಮಂಗಲದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಎಡಮಂಗಲ ಗ್ರಾಮದ ಶಾಂತಿಯಡ್ಕ ನಿವಾಸಿ ಮಾದಿಗ ಮುಗೇರ(58) ಎಂದು ಗುರುತಿಸಲಾಗಿದೆ.

 

 

ಮನೆಯ ಸಮೀಪದ ಕಾಡಿಗೆ ಸೌದೆ ತರಲೆಂದು ಹೋದಾಗ ಅಸ್ವಸ್ಥಗೊಂಡು ಬೊಬ್ಬೆ ಹಾಕಿದ್ದರು. ಇದನ್ನು ಗಮನಿಸಿದ ಮನೆಯವರು ಅವರನ್ನು ಮನೆಗೆ ಕರೆತಂದು ಉಪಚರಿಸಿದಾಗ ನಿಧನ ಹೊಂದಿದರು ಎನ್ನಲಾಗಿದೆ. ಮೃತರು ಪತ್ನಿ ಕುಂಞËಳು, ಇಬ್ಬರು ಪುತ್ರರಾದ ಆನಂದ, ಚೋಮಣ್ಣ, ಈರ್ವ ಪುತ್ರಿ ಚೆನ್ನಮ್ಮ, ಸಹೋದರರಾದ ಕರಿಯ ಮುಗೇರ, ಅಂಬಾಡಿ ಮುಗೇರ, ಬಾಬು ಮುಗೇರ, ಓರ್ವ ಸಹೋದರಿ ಹೊನ್ನಮ್ಮ ಸೇರಿದಂತೆ ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Also Read  ನೈಜೇರಿಯಾದ ಡ್ರಗ್ ಪೆಡ್ಲರ್ ಸೆರೆ ➤ 25 ಲಕ್ಷ ಮೌಲ್ಯದ ಎಂಡಿಎಂಎ ಜಪ್ತಿ..!!

 

error: Content is protected !!
Scroll to Top