ಸಚಿವ ಯು.ಟಿ ಖಾದರ್ ಕಾರಿಗೆ ಕಲ್ಲು ಎಸೆದು ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.7. ಉಳ್ಳಾಲ ಮುಕ್ಕಚ್ಚೇರಿ ಸಮೀಪ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಝುಬೈರ್ ಅವರ ಮನೆಗೆ ಭೇಟಿ ನೀಡಲು ಬಂದ ಆಹಾರ ಸಚಿವ ಯು.ಟಿ ಖಾದರ್ ಅವರನ್ನು ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಖಾದರ್ ರವರ ಸ್ವಕ್ಷೇತ್ರ ಉಳ್ಳಾಲದ ಮುಕ್ಕಚ್ಚೇರಿಯಲ್ಲಿರುವ ಝುಬೈರ್ ಮನೆಗೆ ಬೇಟಿ ನೀಡಲು ಹೋಗುತ್ತಿದ್ದ ವೇಳೆಯಲ್ಲಿ, ಖಾದರ್ ಕಾರ್‍ಗೆ ಬಿಜೆಪಿ ಕಾರ್ಯಕರ್ತರು ಕಲ್ಲು ಎಸೆದು ಮುತ್ತಿಗೆ ಹಾಕಿದ್ದಾರೆ. ನಂತರ ಖಾದರ್ ಬೇರೆ ಕಾರಿನಲ್ಲಿ ಹೋಗಿದ್ದಾರೆ.

Also Read  ಈ 4 ರಾಶಿಯವರಿಗೆ ಐಶ್ವರ್ಯ ಅಭಿವೃದ್ಧಿ ಉಂಟಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

ಖಾದರ್ ಮಾತನಾಡಿ, ಎಸಿಪಿ ನೇತೃತ್ವದಲ್ಲಿ ರೌಡಿಸಂ ಮಟ್ಟ ಹಾಕಲು ಪ್ರತ್ಯೇಕವಾಗಿ ಎರಡು ತಂಡ ರಚನೆ ಮಾಡಲಾಗಿದೆ. ಉಳ್ಳಾಲ, ಕೊಣಾಜೆ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಆರೋಪ ಮಾಡಿ ಪ್ರಯೋಜನ ಇಲ್ಲ ಎಂದು ತಿಳಿಸಿದರು.

error: Content is protected !!
Scroll to Top