ಬೀಡಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ನವದೆಹಲಿ ನ. 29: ಬೀಡಿಗಾಗಿ ತಮ್ಮ ಸ್ನೇಹಿತನನ್ನೇ ಇನ್ನಿಬ್ಬರು ಸೇರಿ ಕೊಲೆ ಮಾಡಿದ ವಿಚಿತ್ರ ಘಟನೆ ನವದೆಹಲಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಮಲಾಡ್ ನ ಸಿದ್ದಿಕ್ (49) ಕೊಲೆಯಾದ ವ್ಯಕ್ತಿ. ಆತನ ಸ್ನೇಹಿತರಾದ ಮೊಹಮದ್ ಫೈಜಾನ್(20), ಮೊಹಮದ್ ಉಸ್ಮಾನ್ (22), ಜಹೀರ್ ಮನ್ಸೂರಿ(20) ಬಂಧಿತರು. ಎಲ್ಲರೂ ಶಾಹಿನ್ ಬಾಗದ ನದೀಮ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದರು.

 

ಯಮುನಾ ನದಿಯ ದಂಡೆಯ ಮೇಲೆ ಎಲ್ಲರೂ ಸೇರಿ ಕುಳಿತಿದ್ದರು. ಬೀಡಿಗಾಗಿ ಗಲಾಟೆ ಶುರುವಾಗಿದೆ. ಇಬ್ಬರು ಸೇರಿ ಸಿದ್ದಿಕ್ ನನ್ನು ಅಟ್ಟಿಸಿಕೊಂಡು ಹೋಗಿದ್ದರು. ಒಮ್ಮೆ ಜನರೆಲ್ಲ ಸೇರಿ ಗಲಾಟೆ ತಪ್ಪಿಸಿದ್ದರು. ಆದರೂ ಬಿಡದೇ ಮತ್ತೆ ಬೆನ್ನಟ್ಟಿ ಆತನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು‌. ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದ ಸಿದ್ದಿಕ್ ಕೊನೆಯುಸಿರೆಳೆದಿದ್ದಾರೆ.

Also Read  ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ ➤ ಗೃಹ ಸಚಿವ ಬೊಮ್ಮಾಯಿ ಖಡಕ್ ವಾರ್ನಿಂಗ್

 

error: Content is protected !!
Scroll to Top