ಮಲ್ಪೆ :ಸಮುದ್ರದಲ್ಲಿ ಮುಳುಗಿದ 7 ಮಂದಿಯಿದ್ದ ಮೀನುಗಾರಿಕೆ ದೋಣಿ

(ನ್ಯೂಸ್ ಕಡಬ) newskadaba.com ಮಲ್ಪೆ ನ. 29: ಗೋವಾ-ಮಹಾರಾಷ್ಟ್ರ ಗಡಿ ಭಾಗದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರಿದ್ದ ದೋಣಿ ಕಳೆದ ದಿನ  ಮುಳುಗಡೆಯಾಗಿತ್ತು. ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ . ಸಮುದ್ರದಲ್ಲಿ ಮುಳುಗಿದ ದೋಣಿಯು ಮಲ್ಪೆಯದ್ದಾಗಿದ್ದು, ಮಥುರಾ ಹೆಸರಿನ ಈ ಆಳಸಮುದ್ರ ಮೀನುಗಾರಿಕಾ ದೋಣಿಯು ನ. 17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.

 

ದೋಣಿಯಲ್ಲಿ ಏಳು ಮಂದಿ ಮೀನುಗಾರರಿದ್ದರು. ಸಮುದ್ರದಲ್ಲಿ ಮುಳುಗಿದ ದೋಣಿಯಲ್ಲಿ ಬಲೆ, ಡೀಸೆಲ್, ಮೀನು ಸೇರಿದಂತೆ ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗೋವಾ-ಮಹಾರಾಷ್ಟ್ರ ರಾಜ್ಯ ಗಡಿಯಲ್ಲಿ ಸುಮಾರು 22 ಮಾರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿಯ ತಳಭಾಗಕ್ಕೆ ವಸ್ತುವೊಂದು ಡಿಕ್ಕಿ ಹೊಡೆದಿದೆ. ಇದರಿಂದ ದೋಣಿಯ ಮುಳುಗಿದೆ ಎಂದು ತಿಳಿದುಬಂದಿದೆ. ಏಳು ಮಂದಿ ಮೀನುಗಾರರನ್ನು ಪಕ್ಕದಲ್ಲೇ ಹೋಗುತ್ತಿದ್ದ ಮಾಹೂರ್ ದೋಣಿಯವರು ರಕ್ಷಿಸಿದ್ದಾರೆ.

 

 

error: Content is protected !!

Join the Group

Join WhatsApp Group