ಶಿಲೀಂಧ್ರಶಾಸ್ತ್ರ ಸಂಶೋಧನಾ ಕ್ಷೇತ್ರ ➤ ಪ್ರೊ.ಕೆ.ಆರ್. ಶ್ರೀಧರ್‍ರವರಿಗೆ ವಿಶೇಷ ಸ್ಥಾನಮಾನ

(ನ್ಯೂಸ್ ಕಡಬ) newskadaba.com ಮಂಗಳೂರು . 29: ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರೊ. ಕೆ.ಆರ್.ಶ್ರೀಧರ್‍ರವರಿಗೆ ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಪೋರ್ಡ್ ವಿಶ್ವವಿದ್ಯಾನಿಲಯದಿಂದ ನಿರ್ವಹಿಸಲ್ಪಟ್ಟ ಮೆಗಾ ದತ್ತಾಂಶ ವಿಶ್ಲೇಷಣೆಯ ಪ್ರಕಾರ ಶಿಲೀಂಧ್ರಶಾಸ್ತ್ರ ಸಂಶೋಧನಾಕ್ಷೇತ್ರದಲ್ಲಿ ವಿಶ್ವದಅಗ್ರ 2%ವಿಜ್ಞಾನಿಗಳಲ್ಲಿ ಉನ್ನತ ಸ್ಥಾನಮಾನ ಲಭಿಸಿದೆ.

ಸ್ಟ್ಯಾನ್ ಪೋರ್ಡ್  ವಿಶ್ವವಿದ್ಯಾನಿಲಯದ ವಿಜ್ಞಾನಿಗಳು “ಓಪನ್ ಅಕ್ಸ್‍ಸ್ ಜರ್ನ್‍ಲ್ ಪ್ಲಾಸ್ ಬಯಾಲಜಿ” (PLOS Biology)ಯಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ.ಪ್ರೊ.ಕೆ.ಆರ್.ಶ್ರೀಧರ್‍ರವರು ಕರ್ನಾಟಕದ ದಕ್ಷಿಣಕನ್ನಡ, ಕೊಡಗು ಮತ್ತು ಪಶ್ಚಿಮಘಟ್ಟ ಪ್ರದೇಶಗಲ್ಲಿನ ಶಿಲೀಂದ್ರಗಳ ಕುರಿತು ನಿರ್ವಹಿಸಿದ ಸಂಶೋಧನೆಗೆ ವಿಶೇಷ ಸ್ಥಾನಮಾನದ ಗೌರವ ಲಭಿಸಿದೆ. ಪ್ರೊ .ಕೆ.ಆರ್.ಶ್ರೀಧರ್‍ರವರ ವಿಶೇಷ ಸಾಧನೆಯನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಹಾಗೂ ಕುಲಸಚಿವ ಕೆ.ರಾಜು ಮೊಗವೀರ. ಇವರ ಉಪಸ್ಥಿತಿಯಲ್ಲಿ ಜೀವವಿಜ್ಞಾನ ವಿಭಾಗದಲ್ಲಿ ಗೌರವಿಸಿ ಸನ್ಮಾನಿಸಲಾಯಿತು ಎಂದು ವಿವಿ. ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ನಂತೂರು: ಬಸ್-ಲಾರಿ-ಕಾರು ಸರಣಿ ಅಪಘಾತ ► ಮಹಿಳೆ ಮೃತ್ಯು, 15 ಕ್ಕೂ ಹೆಚ್ಚು ಮಂದಿಗೆ ಗಾಯ

 

error: Content is protected !!
Scroll to Top