ನಗರದಲ್ಲಿ ಮತ್ತೊಂದು ‘ಉರ್ದುವಿನಲ್ಲಿ ಕಾಣಿಸಿಕೊಂಡ ಉಗ್ರ’ ಬರಹ

(ನ್ಯೂಸ್ ಕಡಬ) newskadaba.com ಮಂಗಳೂರು . 29: ಉಗ್ರ ಸಂಘಟನೆ ಪರ ಜೈಕಾರ ಘೋಷಣೆ ಬರಹ ಕಾಣಿಸಿಕೊಂಡ ಎರಡೇ ದಿನಗಳ ಅಂತರದಲ್ಲಿ ನಗರದ ಕೋರ್ಟ್ ಆವರಣದಲ್ಲಿ ಮತ್ತೊಂದು ಇಂತಹದ್ದೇ ಬರವಣಿಗೆ ಕಾಣಿಸಿಕೊಂಡಿದೆ. ಈ ಬಾರಿ ಉರ್ದುವಿನಲ್ಲಿ ಕಾಣಿಸಿಕೊಂಡ ಬರವಣಿಗೆಯಲ್ಲಿ ‘ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದು’ ಅನ್ನೋ ಅರ್ಥದಲ್ಲಿ ಮತ್ತದೇ ಕಪ್ಪು ಬಣ್ಣದ ಸ್ಪ್ರೇ ಪೇಂಟ್ ಬಳಿದು ಈ ಕೃತ್ಯ ನಡೆಸಲಾಗಿದೆ.

 

ಕಳೆದ ದಿನ ಸಂಜೆ ವೇಳೆಗೆ ಈ ಕೃತ್ಯ ಗಮನಕ್ಕೆ ಬಂದಿದ್ದು, ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಿಳಿಯ ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ.ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳ ಬಂಧನಕ್ಕೆ ತೀವ್ರ ಶೋಧ ಆರಂಭವಾಗಿದೆ.‌

Also Read  ದೀಪಾವಳಿಗೆ ಏಕಮುಖ ವಿಶೇಷ ರೈಲು ಸಂಚಾರ

 

 

error: Content is protected !!
Scroll to Top