ಸಿಎಂಗೆ ಕಪ್ಪುಬಾವುಟ ಪ್ರದರ್ಶನ ➤ 9 ಮಂದಿ ವಿರುದ್ಧ FIR

(ನ್ಯೂಸ್ ಕಡಬ) newskadaba.com ಮಂಗಳೂರು . 28: ಚಾಮರಾಜನಗರದಿಂದ ಮಳವಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಾಹನಕ್ಕೆ ಕಪ್ಪುಪಟ್ಟಿ ಪ್ರದರ್ಶನ ಮಾಡಿದ ಹಿನ್ನೆಲೆ 9 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಪಟ್ಟಣದ ಅನಂತ ರಾಂ ವೃತ್ತದ ಬಳಿ ಸಿಎಂ ವಾಹನ ತೆರಳುತ್ತಿದ್ದ ವೇಳೆ ರಸ್ತೆ ಮಧ್ಯೆ ಏಕಾಏಕಿ ಧಾವಿಸಿ ವಾಹನಕ್ಕೆ ಕಪ್ಪುಪಟ್ಟಿ ಪ್ರದರ್ಶಿಸಲು ಮುಂದಾದ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕ ಅಧ್ಯಕ್ಷೆ ದೇವಿ ಅವರನ್ನು ಪೊಲೀಸರು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರ ವಿರುದ್ಧವೂ ಮಹಿಳೆ ಗರಂ ಆದರು ಎನ್ನಲಾಗಿದೆ. ಸಂಘಟನೆಯ ದೇವಿ, ಮಂಜುಳಾ, ಸುಶೀಲಾ, ಮಹದೇವಮ್ಮ, ಸುನೀತಾ, ಎಚ್.ಕೆ.ತಿಮ್ಮೇಗೌಡ, ರಾಮಕೃಷ್ಣ, ಭರತ್‌ ರಾಜ್‌, ಟಿ.ಎಚ್‌.ಆನಂದ್‌ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

Also Read  ಪೇರಡ್ಕ: ನೂತನ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಕೆ ಹಮೀದ್ ರವರಿಗೆ ಸನ್ಮಾನ

error: Content is protected !!
Scroll to Top