(ನ್ಯೂಸ್ ಕಡಬ) newskadaba.com ಸುಳ್ಯ ನ. 28: NSS ಸೇವಾ ಸಂಗಮ ಟ್ರಸ್ಟ್ ನಿಂದ ಸುಳ್ಯ ಮತ್ತು ಕಡಬ ತಾಲೂಕು ಮಟ್ಟದ “ಸ್ವಚ್ಚ ಕಾಲೋನಿ” ಸ್ಪರ್ಧೆಗೆ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘವು ಇತ್ತೀಚೆಗೆ ಚಾಲನೆ ನೀಡಲಾಯಿತು. ಪ್ರಸ್ತುತ ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಕಲ್ಪನೆಗೆ ಪೂರಕವಾಗಿ ಹಮ್ಮಿಕೊಂಡ ಈ ವಿನೂತನ ಸ್ಪರ್ಧೆಯನ್ನು ಪರಿಶಿಷ್ಟ ವರ್ಗಗಳ ಕಾಲೋನಿಗಳಿಗೆ ಸೀಮಿತಗೊಳಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ವಿಜೇತ ಕಾಲೊನಿಯ ಅಭಿವೃದ್ಧಿಗೆ ಟ್ರಸ್ಟ್ ನಿಂದ ರೂ 50,000 ವನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು.
ಗುತ್ತಿಗಾರು ಗ್ರಾಮದ ಕಮಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಪರ್ಧೆಯ ಮಾಹಿತಿ ಪತ್ರ ಬಿಡುಗಡೆ ಮಾಡುವ ಮೂಲಕ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವಿ.ಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಗಣೇಶ್ ಎನ್. ಆರ್. ವಹಿಸಿದ್ದರು. ಮುಖ್ಯ ಅತಿಧಿಗಳಾಗಿ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ, ಸುನಿಲ್ ಕುಮಾರ್ ಎನ್.ಪಿ, ಸ್ಥಳೀಯ ದಾನಿಗಳಾದ ನಿಶ್ಚಿತ್ ದೇವಸ್ಯ, ರಾಧಾಕೃಷ್ಣ ತುಪ್ಪದ ಮನೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿನೋದ್ ಛತ್ರಪ್ಪಾಡಿ, ಶಾಲಾ ಗೌರವ ಶಿಕ್ಷಕಿ ತೇಜಸ್ವಿನಿ ಕೆಂಬಾರೆ, ಅಂಗನವಾಡಿ ಕಾರ್ಯಕರ್ತೆ ಹೇಮಲತಾ, ಸೇವಾ ಸಂಗಮದ ಕಾರ್ಯಧ್ಯಕ್ಷ ಮಧುಕಿರಣ್, ಕಾರ್ಯದರ್ಶಿ ವಿಶ್ವಕಿರಣ್, ಟ್ರಸ್ಟ್ ನ ಕಾರ್ಯದರ್ಶಿ ಸುಜಿತ್ ಎಂ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟ್ರಸ್ಟ್ ನ ಅಧ್ಯಕ್ಷ ವಿಜೇತ್ ಶಿರ್ಲಾಲ್ ಸ್ವಾಗತಿಸಿ, ಮಧುಕಿರಣ್ ವಂದಿಸಿದರು, ಮನೋಜ್ ಏನೆಕಲ್ಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಚತೆ ಹಾಗೂ ಕಮಿಲ ಅಂಗನವಾಡಿಗೆ ಪೈಂಟಿಂಗ್ ಕೆಲಸ ಮಡಲಾಯಿತು.