ಮರಳುಗಾರಿಕೆಗೆ ಯಂತ್ರ ಬಳಸುವಂತಿಲ್ಲ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು . 28: ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆರವು ಹಾಗೂ ಲೋಡಿಂಗ್ ಕಾರ್ಯಗಳನ್ನು ಯಂತ್ರಗಳ ಮೂಲಕ ನಡೆಸಿದರೆ ಅಂತಹವರ ಪರವಾನಿಗೆ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎಚ್ಚರಿಕೆ ನೀಡಿದ್ದಾರೆ.

ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮರಳು ತೆಗೆಯಲು ಯಾವುದೇ ಯಂತ್ರ ಬಳಸುವಂತಿಲ್ಲ. ಮೆಶೀನ್ ಬೋಟ್‌ಗಳನ್ನೂ ಬಳಸುವಂತಿಲ್ಲ.

ತೆಗೆದ ಮರಳನ್ನು ಮರಳಿನ ದಕ್ಕೆ ವಿನಾಃ ಬೇರೆಡೆ ಶೇಖರಿಸಿ ಇಡುವಂತಿಲ್ಲ ಎಂದ ಅವರು, ಇರುವೈಲು ಹಾಗೂ ಅತಿಕಾರಿ ಬೆಟ್ಟು ಪ್ರದೇಶದಲ್ಲಿ ಅತೀ ಹೆಚ್ಚು ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಆ ವ್ಯಾಪ್ತಿಯ ಸಂಬಂಧಪಟ್ಟ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

Also Read  ಕೌಕ್ರಾಡಿ: ಪೂಜೆಗೆ ಮಾವಿನ ಎಲೆ ಬೇಕೆಂದು ನಂಬಿಸಿ ಕಳ್ಳತನ ► ನಗ, ನಗದನ್ನು ದೋಚಿದ ಅಪರಿಚಿತ ವ್ಯಕ್ತಿ

error: Content is protected !!
Scroll to Top