(ನ್ಯೂಸ್ ಕಡಬ) newskadaba.com ಮಂಗಳೂರು ನ. 28: ಮಂಗಳೂರಿನ ಪಡೀಲ್ ಜಂಕ್ಷನ್ ನಿಂದ ಬಿಕರ್ನಕಟ್ಟೆಗೆ ಸಂಚರಿಸುವ ರಸ್ತೆಯಲ್ಲಿ ಪಡುಮರೋಳಿಯ ದೇವಸ್ಥಾನದ ದ್ವಾರ ಬಳಿ ಮಹಾರಾಷ್ಟ್ರ ನೋಂದಣಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಗಾಂಜಾ ಸಾಗಾಟ ಜಾಲ ಬೇಧಿಸಿರುವ ಮಂಗಳೂರು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಕಾಸರಗೋಡು ನಿವಾಸಿಗಳಾದ ಇಬ್ರಾಹಿಂ ಮಡನ್ನೂರು, ಅಬ್ದುಲ್ ನಿಜಾದ್ ಎಂದು ಗುರುತಿಸಲಾಗಿದೆ. ಮಂಗಳೂರು ನಗರ ಹಾಗೂ ಕೇರಳಕ್ಕೆ ತೆರಳುತ್ತಿತ್ತು. ಗಾಂಜಾ ಸಾಗಾಟದ ವಾಹನವನ್ನು ತಡೆದು ನಿಲ್ಲಿಸಿ ಬರೋಬ್ಬರಿ 24 ಕೆ.ಜಿ ಗಾಂಜಾ ಸಹಿತ 5.73 ಲಕ್ಷ ಮೌಲ್ಯದ ವಸ್ತುಗಳು ಹಾಗೂ 13 ಸಾವಿರ ಮೌಲ್ಯದ ಮೂರು ಮೊಬೈಲ್ ಗಳ ಜೊತೆಗೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದ ಕಾರ್ಯಚರಣೆಯಲ್ಲಿ ಇಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಠಾಣಾ ಇನ್ಸ್ಪೆಕ್ಟರ್ ಕೆ.ಕೆ ರಾಮಕೃಷ್ಣ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.