ಬೆಳ್ತಂಗಡಿ: ವಿದ್ಯುತ್ ಪ್ರವಾಹಿಸಿ ಓರ್ವ ಮೃತ್ಯು ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 27: ಬೆಳ್ತಂಗಡಿ ತಾಲೂಕಿನ ಕಳೆಂಜ ಇಲ್ಲಿನ ಶಾಲೆತ್ತಡ್ಕ ಜಂಕ್ಷನ್ ನಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಇಂದು ನಡೆದಿದೆ.

 

 

ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಯನ್ನು ಪ್ರತಾಪ್ ಮೂಡಬಿದ್ರೆ(20.ವ) ಎಂದು ಗುರುತಿಸಲಾಗಿದೆ. ಮೂಡಬಿದ್ರೆಯ ಗುತ್ತಿಗೆದಾರರಾದ ಕುಮಾರ್ ಎಲೆಕ್ಟ್ರಿಕಲ್ಸ್ ನ ಸಿಬ್ಬಂದಿಗಳಾದ ಇವರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬದಲ್ಲಿ ಇರುವಾಗಲೇ ವಿದ್ಯುತ್ ಶಾಕ್ ತಗುಲಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಜೊತೆಗಿದ್ದ ನಾಗಪ್ಪ ಮೂಡಬಿದ್ರೆ ಹಾಗೂ ಕಿಶೋರ್ ಮೂಡಬಿದ್ರೆ ಇವರುಗಳಿಗೆ ಗಾಯಗಳಾಗಿವೆ.

Also Read  ಕಡಬ: ಹಾವು ಕಡಿದು ಮಹಿಳೆ ಮೃತ್ಯು ► ರಬ್ಬರ್ ಶೀಟ್ ಒಣಗಿಸಲು ತೆರಳುತ್ತಿದ್ದಾಗ ಘಟನೆ

 

error: Content is protected !!
Scroll to Top