(ನ್ಯೂಸ್ ಕಡಬ) newskadaba.com ಕಡಬ,ಅ.6. ನೂಜಿಬಾಳ್ತಿಲ ಬೆಥನಿ ಸಂ.ಪ.ಪೂ.ಕಾಲೇಜಿನಲ್ಲಿ ನಡೆಯುತ್ತಿರುವ ಕಡಬ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಬುಧವಾರ ರಾತ್ರಿ ಶಿಬಿರಾಗ್ನಿ ಕಾರ್ಯಕ್ರಮ ನಡೆಯಿತು.
ಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ನಿವೃತ್ತ ಮುಖ್ಯ ಗುರು ಜನಾರ್ದನ ಗೌಡ ಪಣೆಮಜಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿರು. ಮೆಸ್ಕಾಂ ಸಹಾಯಕ ಇಂಜಿನಿಯರ್ ಸಜಿ, ಸುದ್ದಿಪತ್ರಿಕೆ ವರದಿಗಾರ ಖಾದರ್ ಸಾಹೇಬ್ ಕಲ್ಲುಗುಡ್ಡೆ, ಬೆಥನಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಜಾರ್ಜ್ ಟಿ.ಎಸ್, ಕಡಬ ಕಾಲೇಜಿನ ಉಪನ್ಯಾಸಕಿ ಲಾವಣ್ಯಹೇಮಂತ್ ಕಡಬ ಸಂದರ್ಭೋಚಿತವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕ ವಾಸುದೇವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಾಧಿಕಾರಿ ಸೆಲಿನ್ ಕೆ.ಪಿ ಸ್ವಾಗತಿಸಿ, ಶಿಬಿರಾರ್ಥಿ ಕೃತಿಕಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಭವ್ಯ ವಂದಿಸಿದರು. ಉಪನ್ಯಾಸಕರಾದ ಜೋಸೆಫ್ ಟಿ.ಜೆ, ಶಾಂಭವಿ, ಜಿನ್ಸಿ, ಬೀನಾ ಜೋರ್ಜ್, ಅನಿಸೆಲಿನ್, ಅರ್ಪಿತಾ, ಶಾರೀರಿಕ ಶಿಕ್ಷಕ ಪ್ರವೀಣ್, ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ಬಾಲಕೃಷ್ಣ ರೈ, ಬಿಜು, ಮತ್ತಾಯಿ, ಶಿಬಿರದ ನಾಯಕ ಕಡಬ ಪಿ.ಯು ಕಾಲೇಜಿನ ವಿದ್ಯಾರ್ಥಿ ಗಣೇಶ್, ನಾಯಕಿ ಧನ್ಯಶ್ರೀ, ವಿದ್ಯಾರ್ಥಿ ನಾಯಕ ದಿನೇಶ್ ಸಹಕರಿಸಿದರು.