ಅರಬ್ಬೀ ಸಮುದ್ರದಲ್ಲಿ MiG-29K ವಿಮಾನ ಪತನ

(ನ್ಯೂಸ್ ಕಡಬ) newskadaba.com ನವದೆಹಲಿ . 27: ಕಳೆದ ದಿನ 5 ಗಂಟೆ ಸುಮಾರಿಗೆ ಅರಬ್ಬಿ ಸಮುದ್ರದ ಬಳಿ ಹಾರಾಟ ನಡೆಸುತ್ತಿದ್ದ MiG-29K ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ ಅಂತ ಭಾರತೀಯ ನೌಕಾ ಪಡೆ ತಿಳಿಸಿದೆ.

 

ಘಟನೆ ವೇಳೆ ಓರ್ವ ಪೈಲಟ್​ನನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಪೈಲಟ್​ಗಾಗಿ ಏರ್​​ ಹಾಗೂ ಸರ್ಫೇಸ್​ ಘಟಕದಿಂದ ಹುಟುಕಾಟ ನಡೆಸಲಾಗ್ತಿದೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ. ಕಳೆದ ಒಂದು ವರ್ಷದಲ್ಲಿ ಮಿಗ್ 29ಏಯ ಮೂರನೇ ಅಪಘಾತ ಪ್ರಕರಣ ಇದಾಗಿದೆ. ಕಳೆದ ನವೆಂಬರ್ 16ರಂದು ಗೋವಾದ ಗ್ರಾಮವೊಂದರ ಬಳಿ ಮಿಗ್ ತರಬೇತಿ ವಿಮಾನ ಪತನಗೊಂಡಿತ್ತು. ಈ ವೇಳೆ ಇಬ್ಬರು ಪೈಲಟ್​ಗಳು​ ಸುರಕ್ಷಿತವಾಗಿ ಕೆಳಗಿಳಿದಿದ್ದರು.

Also Read  ವಿಜಯಲಕ್ಷ್ಮಿ ದರ್ಶನ್‍ಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ

 

 

error: Content is protected !!
Scroll to Top